×
Ad

ಕಟ್ಕೆರೆ ಆಶ್ರಮದಲ್ಲಿ ಬಾಲ ಯೇಸುವಿನ ವಾರ್ಷಿಕ ಹಬ್ಬ

Update: 2025-01-19 22:11 IST

ಕುಂದಾಪುರ, ಜ.19: ಕೊಟೇಶ್ವರ ಕಟ್ಕೆರೆ ಬಾಲಯೇಸುವಿನ ಆಶ್ರಮದಲ್ಲಿ ಬಾಲ ಯೇಸುವಿನ ವಾರ್ಷಿಕ ಹಬ್ಬದಲ್ಲಿ ಮಂಗಳೂರು ಧರ್ಮಪ್ರಾಂತದ ವಿಕಾರ್ ಜನರಲ್ ಅಂ.ವಂ. ಮ್ಯಾಕ್ಸಿಮ್ ನೊರೊನ್ಹಾ ಅವರು ಪ್ರಧಾನ ಯಾಜಕರಾಗಿ ಪವಿತ್ರ ಬಲಿದಾನ ಅರ್ಪಿಸಿದರು.

ಈ ಸಂದರ್ಭದಲ್ಲಿ ಸಂದೇಶ ನೀಡಿ ಮಾತನಾಡಿದ ಅ.ವಂ. ನೊರೊನ್ಹಾ, ಪವಿತ್ರ ಸಭೆಯನ್ನು ನಾಶ ಮಾಡಲು ಬಹಳಷ್ಟು ಮಂದಿ ಪ್ರಯತ್ನಿಸಿದ್ದಾರೆ. ಆದರೆ ಪವಿತ್ರ ಸಭೆ ನಾಶ ಆಗಲಿಲ್ಲ. ಅದು ಪವಿತ್ರ ಆತ್ಮನ ಶಕ್ತಿಯಿಂದ ಆರಂಭಗೊಂಡಿದ್ದು, ಇದನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ ಎಂದರು.

ಭರವಸೆ ಇಲ್ಲದೆ ನಾವು ಈ ಜಗತ್ತಿನಲ್ಲಿ ಜೀವಿಸಲು ಸಾಧ್ಯವಿಲ್ಲ. ಯೇಸು ನಮಗೆ ಭರವಸೆ ನೀಡಿದ್ದಾರೆ, ದೇವರಲ್ಲಿ ಭರವಸೆ ಹೆಚ್ಚಿಸೋಣ. ಭರವಸೆಯ ಯಾತ್ರಿಕರಾಗಿ ನಾವು ಮುನ್ನೆಡೆಯೋಣ ಎಂದು ಅವರು ಕರೆ ನೀಡಿದರು.

ಬಾಲಯೇಸುವಿನ ಮಹಾ ಹಬ್ಬದ ಬಲಿದಾನದಲ್ಲಿ ಕುಂದಾಪುರ ವಲಯ ಪ್ರಧಾನ ವಂ. ಪೌಲ್ ರೇಗೊ ಹಬ್ಬದ ಶುಭ ಕೋರಿದರು. ಕುಂದಾಪುರ ವಲಯದ ಇಗರ್ಜಿಗಳ ಧರ್ಮಗುರುಗಳು, ಕಾರ್ಮೆಲ್ ಪಂಗಡದ ಧರ್ಮಗುರುಗಳು, ಅತಿಥಿ ಧರ್ಮಗುರುಗಳು, ಹಲವು ಕಾನ್ವೆಂಟಿನ ಧರ್ಮಭಗಿನಿಯರು ಮತ್ತು ಭಕ್ತಾಧಿಗಳು ಹಾಜರಿದ್ದರು.

ಕಟ್ಕೆರೆ ಬಾಲಯೇಸು ಆಶ್ರಮದ ವಂ. ಜೋ ತಾವ್ರೊ, ವಂ. ಜೋಸ್ವಿ ಸಿದ್ದಕಟ್ಟೆ ಉಪಸ್ಥಿತರಿದ್ದರು. ಕಟ್ಕೆರೆ ಬಾಲ ಯೇಸುವಿನ ಮುಖ್ಯಸ್ಥರಾದ ವಂ. ಪ್ರವೀಣ್ ಪಿಂಟೊ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News