×
Ad

ಕೋಳಿಅಂಕ: ಇಬ್ಬರ ಬಂಧನ

Update: 2025-01-21 21:53 IST

ಶಂಕರನಾರಾಯಣ, ಜ.21: ಆಜ್ರಿ ಗ್ರಾಮದ ಗೊವೆಹಾಡಿ ಎಂಬಲ್ಲಿ ಜ.20ರಂದು ಕೋಳಿ ಅಂಕ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಶಂಕರ ನಾರಾಯಣ ಪೊಲೀಸರು ಬಂಧಿಸಿದ್ದಾರೆ.

ಯೊಗೀಶ್ ಮತ್ತು ಉದಯ ಬಂಧಿತ ಆರೋಪಿಗಳು. ಉಳಿದ ಆರೋಪಿಗಳಾದ ಶರತ್, ಮಾಧವ, ಅರುಣ , ಗಣೇಶ್ ಮತ್ತು ಮಂಜುನಾಥ ಎಂಬವರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.

ಬಂಧಿತರಿಂದ ಮೂರು ಕೋಳಿ ಹುಂಜ, ಕೋಳಿ ಕತ್, ಕೋಳಿ ಕಾಲಿಗೆ ಕೋಳಿಬಾಳನ್ನು ಮತ್ತು 1,850ರೂ. ನಗದು, ಮೊಬೈಲ್, ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News