ಬಸ್ರೂರಿನ ಕೃಷಿಕ ಹರೀಶ್ ಅಡಿಗರಿಗೆ ಸನ್ಮಾನ
ಕುಂದಾಪುರ, ಜ.29: ಜೆಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಕಾರ್ಯಕ್ರಮದ ಅಡಿಯಲ್ಲಿ ಬಸ್ರೂರಿನ ಕೃಷಿಕ ಹರೀಶ್ ಅಡಿಗ ಅವರನ್ನು ಅವರ ನಿವಾಸದಲ್ಲಿ ವಕೀಲ ರವಿಕಿರಣ್ ಮುರ್ಡೇಶ್ವರ ಸನ್ಮಾನಿಸಿದರು.
ಬಳಿಕ ಮಾತನಾಡಿದ ವಿಕಿರಣ್ ಮುರ್ಡೇಶ್ವರ, ಹರೀಶ್ ತಮ್ಮ ಬದುಕನ್ನು ಕೃಷಿ ಕ್ಷೇತ್ರಕ್ಕೆ ಮಿಸಲಿಟ್ಟು, ವಿವಿಧ ಬಗೆಯ ಬೆಳೆಗಳನ್ನು ಬೆಳೆಸುದರ ಮುಖೇನ ಸಮಾಜಕ್ಕೆ ಮಾದರಿಯಾಗಿದ್ದಾರೆ. ಅವರ ಮನಸ್ಸಿನ ಖುಷಿ ಅಡಗಿರುವುದು ಅವರ ಕೃಷಿ ಬದುಕಿನಲ್ಲಿ ಎಂದು ತಿಳಿಸಿದರು.
ಮುಖ್ಯ ಅತಿಥಿ ವಿಕಾಸ್ ಹೆಗ್ಡೆ ಮಾತನಾಡಿದರು. ಅಧ್ಯಕ್ಷತೆಯನ್ನು ಜೆಸಿಐ ಕುಂದಾಪುರ ಸಿಟಿ ಅಧ್ಯಕ್ಷ ಯೂಸುಫ್ ಸಲೀಮ್ ವಹಿಸಿದ್ದರು. ವಲಯ 15ರ ವಲಯಾಧಿಕಾರಿ ಸುಮಾ ಆಚಾರ್, ಜೆಸಿಐ ಕುಂದಾಪುರ ಸಿಟಿ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ಪೂರ್ವ ಅಧ್ಯಕ್ಷ ನಾಗೇಶ್ ನಾವಡ, ವಿಜಯ ಭಂಡಾರಿ, ಉಪಾಧ್ಯಕ್ಷ ಸರೋಜಾ, ಲೇಡಿ ಜೇಸಿ ಚೈಯರ್ ಪರ್ಸನ್ ಶೈಲಾ ಲೂಯ್ಸ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಕಿರಣ್ ಜಾಲಾಡಿ ವಂದಿಸಿದರು.