×
Ad

ಪ್ರಗತಿನಗರ ನಾಗರಿಕ ಸಮಿತಿ ಉದ್ಘಾಟನೆ

Update: 2025-02-04 18:26 IST

ಉಡುಪಿ: ನಗರದ ಶಿರಿಬೀಡು ವಾರ್ಡಿನ ಪ್ರಗತಿನಗರದಲ್ಲಿ ನೂತನವಾಗಿ ಪ್ರಾರಂಭಗೊಂಡ ಪ್ರಗತಿನಗರ ನಾಗರಿಕ ಸಮಿತಿಯ ಉದ್ಘಾಟನೆ ಇತ್ತೀಚೆಗೆ ಆಶಾ ಗಾರ್ಡನ್‌ನಲ್ಲಿ ಜರಗಿತು.

ಸಮಿತಿಯನ್ನು ನಗರಸಭಾ ಸದಸ್ಯ ಟಿ.ಜಿ.ಹೆಗ್ಡೆ ಉದ್ಘಾಟಿಸಿದರು. ಸಮಿತಿಯ ನೂತನ ಅಧ್ಯಕ್ಷ ಕೃಷ್ಣಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಲಹೆಗಾರದ ಅಮಿತ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಕೆ.ಟಿ.ಸುಬ್ಬಣ್ಣ ರೈ ಉಪಸ್ಥಿತರಿದ್ದರು.

ಮುಖ್ಯ ಅತಿಥಿಯಾಗಿ ಉಡುಪಿ ನಗರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್, ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಬಗ್ಗೆ ವಿವರವಾದ ಮಾಹಿತಿ ನೀಡಿ ನಾಗರಿಕರು ಜಾಗೃತರಾಗಿರುವಂತೆ ತಿಳಿಸಿದರು.

ಸಮಿತಿಯ ಗೌರವ ಅಧ್ಯಕ್ಷ ಬಸ್ರೂರು ರಾಜೀವ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿದರು. ಸಮಿತಿ ಕಾರ್ಯದರ್ಶಿ ಎನ್.ಆರ್. ಗೋವಿಂದ ಸ್ವಾಗತಿಸಿದರು. ಉಪಾಧ್ಯಕ್ಷ ದೇವದಾಸ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಸಹ ಕಾರ್ಯದರ್ಶಿ ಶಬ್ಬೀರ್ ಅಹ್ಮದ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News