×
Ad

ಕಳ್ತೂರು ಸಂತೆಕಟ್ಟೆ ಗೆಳೆಯರ ಬಳಗದ ವಾರ್ಷಿಕೋತ್ಸವ

Update: 2025-02-08 21:38 IST

ಉಡುಪಿ, ಫೆ.8: ಕಳ್ತೂರು ಸಂತೆಕಟ್ಟೆಯ ಗೆಳೆಯರ ಬಳಗ ಕ್ರೀಡಾ ಸಂಘದ 6ನೇ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಗೆಳಯರ ಬಳಗ ಕ್ರೀಡಾ ಸಂಘದ ಅಧ್ಯಕ್ಷ ಚಂದ್ರ ಕಳ್ತೂರು ಅಧ್ಯಕ್ಷತೆಯಲ್ಲಿ ಕಳ್ತೂರು ಬುಕ್ಕಿಗುಡ್ಡೆ ಕೊರಗರ ಹಾಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ, ಪ್ರತಿಭಾವಂತ ಕೊರಗ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

ರಂಜಿತ್ ಕಳ್ತೂರು ಅತಿಥಿಗಳನ್ನು ಸ್ವಾಗತಿಸಿದರೆ, ಸುಚಿತ್ರಾ ಕಳ್ತೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಹುಮಾನಿತರ ಪಟ್ಟಿಯನ್ನು ಸುಪ್ರೀತಾ ಹಾಗೂ ಸುಚಿತ್ರಾ ಕಳ್ತೂರು, ಸನ್ಮಾನಿತರ ಅಭಿನಂದನಾ ಪತ್ರವನ್ನು ರಂಜಿತಾ ಕಳ್ತೂರು ವಾಚಿಸಿ ದರು. ಕಾರ್ಯಕ್ರಮವನ್ನು ಸುರೇಂದ್ರ ಕಳ್ತೂರು ಹಾಗೂ ವಿಮಲ ಕಳ್ತೂರು ನಿರೂಪಿಸಿದರು.ಸಂಘದ ಕಾರ್ಯದರ್ಶಿ ಸುರೇಶ್ ಕಳ್ತೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News