ತೋಡಿಗೆ ಬಿದ್ದು ಕೃಷಿಕ ಮೃತ್ಯು
Update: 2025-02-10 21:05 IST
ಅಜೆಕಾರು, ಫೆ.10: ತೆಂಗಿನ ಕಾಯಿ ಕೊಯ್ಯಲು ತೋಟಕ್ಕೆ ಹೋದ ಕೃಷಿಕರೊಬ್ಬರು ತೋಡಿನ ನೀರಿಗೆ ಬಿದ್ದು ಮೃತಪಟ್ಟ ಘಟನೆ ಫೆ.9ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಮರ್ಣೆ ಗ್ರಾಮದ ನೀಲಬೈಲು ನಿವಾಸಿ ಶೀನ(77) ಎಂದು ಗುರುತಿಸಲಾಗಿದೆ. ಇವರು ತೆಂಗಿನ ಕಾಯಿ ಹಾಗೂ ಸೀಯಾಳ ಕೊಯ್ಯಲು ದೋಂಟಿ ತೆಗೆದುಕೊಂಡು ಹೋದವರು ಆಕಸ್ಮಿಕವಾಗಿ ತೋಡಿನ ನೀರಿಗೆ ಬಿದ್ದು ಮೃತಪಟ್ಟಿದ್ದಾ ರೆಂದು ತಿಳಿದುಬಂದಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.