ರಸ್ತೆ ಬದಿ ದನದ ತ್ಯಾಜ್ಯ ಪತ್ತೆ: ಪ್ರಕರಣ ದಾಖಲು
Update: 2025-02-10 21:07 IST
ಕೊಲ್ಲೂರು, ಫೆ.10: ಜಡ್ಕಲ್ ಗ್ರಾಮದ ಕಾನ್ಕಿ ಕರ್ಕಾಡಿ ರಸ್ತೆ ಬದಿಯಲ್ಲಿ ಫೆ.9ರಂದು ಸಂಜೆ ವೇಳೆ ದನದ ತಾಜ್ಯಗಳು ಪತ್ತೆಯಾಗಿರುವ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡು ದನ, ಕರುವಿನ ತಲೆ ಹಾಗೂ ಅದರ ಕಾಲುಗಳು ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದೆ. ದುಷ್ಕರ್ಮಿಗಳು ಮಾಂಸಕ್ಕಾಗಿ ಇವುಗಳನ್ನು ಹತ್ಯೆ ಮಾಡಿ, ಅದರ ಕಳೆಬರವನ್ನು ಚೀಲವೊಂದರಲ್ಲಿ ತುಂಬಿಸಿ 2 ದಿನಗಳ ಹಿಂದೆ ರಸ್ತೆ ಬದಿ ಎಸೆದಿರುವುದಾಗಿ ದೂರಲಾಗಿದೆ.