×
Ad

ಎಮ್ಮೆ ಸಾಗಾಟದ ಟೆಂಪೋ ಪಲ್ಟಿ: ಇಬ್ಬರಿಗೆ ಗಾಯ

Update: 2025-02-10 21:10 IST

ಉಡುಪಿ, ಫೆ.10: ಅಕ್ರಮವಾಗಿ ಎಮ್ಮೆಗಳನ್ನು ಸಾಗಿಸುತ್ತಿದ್ದರು ಎನ್ನಲಾದ ಟೆಂಪೊಂದು ಮಗುಚಿ ಬಿದ್ದ ಪರಿಣಾಮ ಇಬ್ಬರು ಹಾಗೂ ಎರಡು ಎಮ್ಮೆಗಳು ಗಾಯಗೊಂಡ ಘಟನೆ ಅಂಬಾಗಿಲು ಜಂಕ್ಷನ್ ಬಳಿ ಫೆ.9ರಂದು ಬೆಳಗಿನ ಜಾವ ನಡೆದಿದೆ.

ಗಾಯಗೊಂಡವರನ್ನು ಶೀತಲ್ ಗಣಪತಿ ಬಾಗಣ್ಣರ ಹಾಗೂ ಯಮನಪ್ಪ ರಮೇಶ್ ಅರ್ಜುನ ವಾಡ ಎಂದು ಗುರುತಿಸ ಲಾಗಿದೆ. ಪರಶು ಎಂಬಾತ ಓಡಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಟೆಂಪೋದಲ್ಲಿದ್ದ ಐದು ಎಮ್ಮೆಗಳ ಪೈಕಿ ಎರಡು ಎಮ್ಮೆಗಳು ಗಾಯಗೊಂಡಿವೆ.

ಇವರು ಅಕ್ರಮವಾಗಿ ಎಮ್ಮೆಗಳನ್ನು ಸಂಕೇಶ್ವರದಿಂದ ಮಂಗಳೂರಿಗೆ ಸಾಗಿಸುತ್ತಿದ್ದು, ಈ ವೇಳೆ ನಿಯಂತ್ರಣ ತಪ್ಪಿದ ಟೆಂಪೊ ರಸ್ತೆಯಲ್ಲಿ ಮಗುಚಿ ಬಿತ್ತೆನ್ನಲಾಗಿದೆ. ಗಾಯಾಳು ಆರೋಪಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿ ದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News