×
Ad

ಗುಟ್ಕಾ, ಮಾದಕ ದ್ರವ್ಯ ಕುರಿತು ಜಾಗೃತಿ ಕಾರ್ಯಾಗಾರ

Update: 2025-02-19 17:41 IST

ಕುಂದಾಪುರ, ಫೆ.19: ಆಧುನಿಕತೆಯ ವೇಗಕ್ಕೆ ತಕ್ಕಂತೆ ವಿದ್ಯಾರ್ಥಿ ಜೀವನ ಬದಲಾಗುತ್ತಿದೆ. ಹಲವು ರೀತಿಯ ಆಮಿಷ ಗಳಿಗೆ ತುತ್ತಾಗಿ, ವಿದ್ಯಾರ್ಥಿಗಳು, ಯುವ ಜನರು ಮಾದಕದ್ರವ್ಯದಂತಹ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ವೈಪರೀತ್ಯ ಉಂಟಾಗುತ್ತಿದೆ. ವಿದ್ಯಾರ್ಥಿ ಜೀವನ ದುಶ್ಚಾಟ ಮುಕ್ತವಾಗಬೇಕಾದರೆ ಜನಜಾಗೃತಿ ಕಾರ್ಯ ಕ್ರಮ ನಿರಂತರವಾಗಿ ನಡೆಯಬೇಕು ಎಂದು ಕುಂದಾಪುರ ಪೊಲೀಸ್ ಠಾಣೆ ಉಪನಿರೀಕ್ಷಕ ನಂಜ ನಾಯ್ಕ್ ಹೇಳಿದ್ದಾರೆ.

ಕುಂದಾಪುರ ಭಂಡಾರ್ಕಾರ್ಸ್‌ ಕಾಲೇಜಿನ ಎನ್‌ಎಸ್‌ಎಸ್, ಎನ್‌ಎನ್‌ಒ ಕಮ್ಯುನಿಟಿ ಸೆಂಟರ್ ಕುಂದಾಪುರ ಜೆಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ಕಾಲೇಜಿನ ಆರ್‌ಎನ್ ಶೆಟ್ಟಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾದ ಗುಟ್ಕಾ, ಮಾದಕ ದ್ರವ್ಯ ಜನಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಅಧ್ಯಕ್ಷತೆಯನ್ನು ಭಂಡಾಕಾರ್ಸ್‌ ಕಾಲೇಜಿನ ಪ್ರಾಂಶುಪಾಲ ಶುಭಕರ ಆಚಾರಿ ವಹಿಸಿದ್ದರು. ಮಾನಸಿಕ ತಜ್ಞ ಡಾ.ಪ್ರಕಾಶ್ ತೋಳಾರ್ ಮಾಹಿತಿ ಮಾರ್ಗ ದರ್ಶನ ನೀಡಿದರು. ಎನ್‌ಎನ್‌ಒ ಕಮ್ಯುನಿಟಿ ಸೆಂಟರ್‌ನ ಪ್ರದಾನ ಕಾರ್ಯದರ್ಶಿ ಹುಸೇನ್ ಹೈಕಾಡಿ, ಭಂಡಾಕಾರ್ಸ್‌ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ.ಎಂ.ಗೊಂಡ, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಪ್ರೊ ಸತ್ಯನಾರಾಯಣ ಹತ್ವಾರ್, ಜೆಸಿಐ ಕುಂದಾಪುರ ಸಿಟಿ ಅಧ್ಯಕ್ಷ ಯೂಸುಫ್ ಸಲೀಮ್, ನಿಕಟಪೂರ್ವ ಅಧ್ಯಕ್ಷ ರಾಘವೇಂದ್ರ ಕುಲಾಲ್, ಪೂರ್ವ ಅಧ್ಯಕ್ಷೆ ಡಾಸೋನಿ, ಎನ್‌ಎಸ್‌ಎಸ್ ಅಧಿಕಾರಿ ಅರುಣ್ ಎ.ಎಸ್., ರಾಮಚಂದ್ರ ಆಚಾರ್ ಮೊದಲಾದವರು ಉಪಸ್ಥಿತರಿದ್ದರು.

ಕಾಲೇಜಿನ ವಿದ್ಯಾರ್ಥಿ ಸಮೀಕ್ಷಾ ಸ್ವಾಗತಿಸಿದರು. ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ಕಿಶನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News