×
Ad

ಶಿಲುಬೆ ದ್ವಂಸ ಪ್ರಕರಣ: ದುಷ್ಕರ್ಮಿಗಳ ಬಂಧನಕ್ಕೆ ಎಸ್‌ಡಿಪಿಐ ಆಗ್ರಹ

Update: 2025-02-23 20:31 IST

ಉಡುಪಿ: ಮೂಡುಬೆಳ್ಳೆಯ ಕಟ್ಟಿಂಗೇರಿ ಗ್ರಾಮದಲ್ಲಿರುವ ಕುದ್ರಮಾಲೆಯ ಬೆಟ್ಟದಲ್ಲಿರುವನ ಪವಿತ್ರ ಶಿಲುಬೆಯನ್ನು ಧ್ವಂಸ ಮಾಡಿ ಕ್ರೈಸ್ತರ ಭಾವನೆಗಳಿಗೆ ನೋವನ್ನು ಉಂಟು ಮಾಡಿದ ಘಟನೆಯನ್ನು ಎಸ್‌ಡಿಪಿಐ ಕಾಪು ಕ್ಷೇತ್ರ ಸಮಿತಿ ಖಂಡಿಸಿದೆ.

ಈ ಕೃತ್ಯವು ಕೇವಲ ಕ್ರೈಸ್ತ ಸಾಮುದಾಯದ ಭಾವನೆಗಳಿಗೆ ಹಾನಿಯುಂಟು ಮಾಡಿದ ಘಟನೆಯಾಗಿರದೆ ಇದು ಜಿಲ್ಲೆಯ ಶಾಂತಿ ಸೌಹಾರ್ದತೆಯನ್ನು ಕೆಡಿಸುವ ಪ್ರಯತ್ನವಾಗಿದೆ. ಆದ್ದರಿಂದ ದುಷ್ಕರ್ಮಿಗಳನ್ನು ಶೀಘ್ರ ಬಂಧಿಸಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸಬೇಕು ಎಂದು ಎಸ್‌ಡಿಪಿಐ ಕಾಪು ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಬ್ದುಲ್ ಖಾದರ್ ಪ್ರಕಟಣೆ ಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News