ಮದ್ಯ ಸೇವನೆ: ನಾಲ್ವರು ವಶಕ್ಕೆ
Update: 2025-02-23 21:39 IST
ಕೋಟ, ಫೆ.23: ಬೇಳೂರು ಗ್ರಾಮದ ಮೊಗೆಬೆಟ್ಟು ಎಂಬಲ್ಲಿರುವ ವೈನ್‌ಶಾಪ್ ಬಳಿ ಫೆ.22ರಂದು ಮಧ್ಯಾಹ್ನ ವೇಳೆ ಸಾರ್ವಜನಿಕವಾಗಿ ಮದ್ಯ ಸೇವಿಸುತ್ತಿದ್ದ ಮೂವರನ್ನು ಕೋಟ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು ಮದ್ಯ ಸೇವಿಸುತ್ತಿದ್ದ ರತೀಶ್, ಪ್ರೀತಮ್, ಶ್ರೀಜಿತ್ ಅಚಾರಿ, ವೇಲು ಎಂಬವರನ್ನು ಮದ್ಯ ಹಾಗೂ ಇತರ ಸೊತ್ತುಗಳೊಂದಿಗೆ ವಶಕ್ಕೆ ಪಡೆದುಕೊಂಡಿದ್ದಾರೆ. ಇದರೊಂದಿಗೆ ವೈನ್ ಶಾಪ್‌ನ ರತ್ನಾಕರ ಹಾಗೂ ಸಿಬ್ಬಂದಿ ಸದಾನಂದ ವಿರುದ್ಧವೂ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.