×
Ad

ಬ್ರಹ್ಮಾವರ: ಏಳನೇ ದಿನ ಪ್ರವೇಶಿಸಿದ ರೈತರ ಅನಿರ್ಧಿಷ್ಟ ಧರಣಿ

Update: 2025-02-27 20:18 IST

ಬ್ರಹ್ಮಾವರ, ಫೆ.27: ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ’ಗುಜರಿ’ ಮಾರಿ ಬಹುಕೊಟಿ ಲೂಟಿ ಮಾಡಿದ ವಂಚನೆಯ ತನಿಖೆ ವಿಳಂಬ ನೀತಿ ಖಂಡಿಸಿ ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ‘ಅನ್ನದಾತರ ಅಹೊರಾತ್ರಿ ಸತ್ಯಾಗ್ರಹ’ 6ನೆ ದಿನವಾದ ಗುರುವಾರವೂ ಮುಂದುವರೆದಿದೆ.

ಜಿಲ್ಲಾ ರೈತ ಸಂಘದ ಕಾವ್ರಾಡಿ ವಲಯ ಗುರುವಾರದ ಪ್ರತಿಭಟನೆ ಮುಂಚೂಣಿಯಲ್ಲಿದ್ದು, ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಂಘಟನೆ ಆಗ್ರಹಿಸಿತು.

ಈ ಸಂದರ್ಭ ರೈತಸಂಘದ ಕಾವ್ರಾಡಿ ವಲಯ ಅಧ್ಯಕ್ಷ ಶರತ್ಚಂದ್ರ ಶೆಟ್ಟಿ, ಪದಾಧಿಕಾರಿಗಳಾದ ಚೇತನ್ ರೈ ಗುಲ್ವಾಡಿ, ಗೋವಿಂದರಾಜ್ ಶೆಟ್ಟಿ, ಮುದ್ದಣ್ಣ ಶೆಟ್ಟಿ, ರವಿದಾಸ್, ಇಕ್ಬಾಲ್ ಗುಲ್ವಾಡಿ, ಸುಧೀಶ್ ಕುಮಾರ್ ಶೆಟ್ಟಿ ಭಾಗವಹಿಸಿದ್ದರು.

ಧರಣಿ ಸತ್ಯಾಗ್ರಹದಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹಾಗೂ ವಿಧಾನಪರಿಷತ್‌ನ ಮಾಜಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಹೈಕಾಡಿ, ಪ್ರಧಾನ ಕಾರ್ಯದರ್ಶಿ ಬೆಳ್ವೆ ಸತೀಶ್ ಕಿಣಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಮುಖಂಡರಾದ ಡಾ. ಅಂಶುಮಂತ್, ಕಿರಣ್ ಹೆಗ್ಡೆ ಅಂಪಾರು, ಆಶೋಕ್ ಶೆಟ್ಟಿ ಚೊರಾಡಿ, ದೇವಾ ನಂದ ಶೆಟ್ಟಿ, ಬಾಂಡ್ಯ ಸುಧಾಕರ ಶೆಟ್ಟಿ, ಮುನಾಫ್, ಹಾರುನ್ ಸಾಹೇಬ್, ಮೋಹನದಾಸ್ ಶೆಟ್ಟಿ ಮಲ್ಯಾಡಿ, ಆಶಾ ಕರ್ವೆಲ್ಲೊ, ಲಕ್ಷ್ಮಣ್ ಶೆಟ್ಟಿ ಕುಂದಾಪುರ, ಕುಂದಾಪುರ ಪುರಸಭೆ ಸದಸ್ಯೆ ಪ್ರಭಾವತಿ ಶೆಟ್ಟಿ, ನಾಮ ನಿರ್ದೆಶಿತ ಸದಸ್ಯ ಶಶಿ ಕುಂದಾಪುರ ಮೊದಲಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News