ಆತ್ಮಹತ್ಯೆ
Update: 2025-02-28 20:55 IST
ಕಾರ್ಕಳ, ಫೆ.28: ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಮುಡಾರು ಗ್ರಾಮದ ವಿನೋದ(46) ಎಂಬವರು ಮನನೊಂದು ಫೆ.27ರಂದು ಮಧ್ಯಾಹ್ನ ವೇಳೆ ಮನೆಯ ಮಾಡಿನ ಮರದ ಪಟ್ಟಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.