×
Ad

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅವ್ಯವಹಾರದ ಬಗ್ಗೆ ಬಿಜೆಪಿ ಸಂಸದರು, ಶಾಸಕರು, ಮೌನ: ಸುರೇಶ್ ಶೆಟ್ಟಿ ಟೀಕೆ

Update: 2025-03-14 19:38 IST

ಉಡುಪಿ, ಮಾ.14: ಬ್ರಹ್ಮಾವರದ ಸಕ್ಕರೆ ಕಾರ್ಖಾನೆಯಲ್ಲಿ ಕೋಟ್ಯಾಂತರ ರೂ. ಅವ್ಯವಹಾರದ ಬಗ್ಗೆ ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಪ್ರತಾಪ್ ಚಂದ್ರ ಶೆಟ್ಟಿ ಇವರ ನೇತೃತ್ವದಲ್ಲಿ ಕಳೆದ 21 ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಉಡುಪಿ ಸಂಸದರಾಗಲಿ ಅಥವಾ ಜಿಲ್ಲೆಯ ಶಾಸಕರುಗಳಾಗಲಿ ಈವರೆಗೆ ಭೇಟಿ ನೀಡಲಿಲ್ಲ. ಬಿಜೆಪಿಯ ಸಂಸದರು ಹಾಗೂ ಬಿಜೆಪಿಯ ಶಾಸಕರುಗಳು ರೈತ ವಿರೋಧಿಗಳೇ ಅಥವಾ ಈ ಅವ್ಯವಹಾರಕ್ಕೆ ಅವರ ಸಮ್ಮತಿ ಇದೆಯೇ ಎಂಬುದನ್ನು ಜಿಲ್ಲೆಯ ಜನರಿಗೆ ತಿಳಿಸಬೇಕಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ ಗಾಂಧಿ ಪಂಚಾಯತ್‌ ರಾಜ್ ಸಂಘಟನೆ ಅಧ್ಯಕ್ಷ ಸುರೇಶ್ ಶೆಟ್ಟಿ ಬನ್ನಂಜೆ ಆಗ್ರಹಿಸಿದ್ದಾರೆ.

ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಕೋಳಿ ಅಂಕದ ಬಗ್ಗೆ ಮಾತ್ರ ಮಾತನಾಡಿದ ಜಿಲ್ಲೆಯ ಬಿಜೆಪಿಯ ಶಾಸಕರುಗಳು ರೈತರ ಈ ಧರಣಿಯ ಬಗ್ಗೆ ಚಕಾರ ಎತ್ತದಿರುವುದು ಸಾಕಷ್ಟು ಸಂಶಯಕ್ಕೆ ಎಡೆ ಮಾಡಿ ಕೊಟ್ಟಿದೆ. ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಈ ಅವ್ಯವಹಾರ ನಡೆದಿದ್ದು, ಈಗಿನ ಸಂಸದರು ಆಗ ಶಾಸಕರು ಹಾಗೂ ಸಚಿವರಾಗಿದ್ದರು. ಅವರು ಈ ಬಗ್ಗೆ ಚಕಾರ ಎತ್ತದಿರುವುದು ನೋಡಿದರೆ ಈ ಅವ್ಯವಹಾರ ಮಾಡಿದವರ ಬೆಂಬಲಕ್ಕೆ ನಿಂತಿದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News