×
Ad

‘ಶಿವ-ಜಯ ಟ್ರೋಫಿ’ ಕ್ರಿಕೆಟ್ ಪಂದ್ಯಾಟ: ಕಾರ್ಕಳ ಎಸ್‌ಕೆಪಿಎಗೆ ಪ್ರಶಸ್ತಿ

Update: 2025-03-25 18:32 IST

ಉಡುಪಿ, ಮಾ.25: ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶೆನ್ ದಕ್ಷಿಣ ಕನ್ನಡ -ಉಡುಪಿ ಜಿಲ್ಲೆ ಇದರ ಉಡುಪಿ ವಲಯದ ವತಿಯಿಂದ ಉಡುಪಿ ಬೀಡಿನಗುಡ್ಡೆಯ ಕ್ರೀಡಾಂಗಣದಲ್ಲಿ ನಡೆದ ಶಿವ -ಜಯ ಟ್ರೋಫಿ 2025 ಕ್ರಿಕೆಟ್ ಪಂದ್ಯಾಟದಲ್ಲಿ ಎಸ್‌ಕೆಪಿಎ ಕಾರ್ಕಳ ತಂಡ ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡಿತು.

ಎಸ್‌ಕೆಪಿಎ ಕಾಪು ತಂಡ ದ್ವಿತೀಯ, ಬ್ರಹ್ಮಾವರ ತಂಡ ತೃತೀಯ ಹಾಗೂ ಉಡುಪಿ ತಂಡ ನಾಲ್ಕನೇ ಬಹುಮಾನ ಪಡೆದುಕೊಂಡಿತು. ಸಮಾರೋಪ ಸಮಾರಂಭದಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಶುಭ ಹಾರೈಸಿದರು. ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ, ಎಸ್‌ಕೆಪಿಎ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್ ಜೈನ್, ಕಡೆಕಾರು ಗ್ರಾಪಂ ಉಪಾಧ್ಯಕ್ಷ ನವೀನ್ ಶೆಟ್ಟಿ ಬಹುಮಾನ ವಿತರಿಸಿದರು.

ವೇದಿಕೆಯಲ್ಲಿ ಗೌರವಾಧ್ಯಕ್ಷ ನವೀನ್ ಬಳ್ಳಾಲ್, ಜಿಲ್ಲಾ ಉಪಾಧ್ಯಕ್ಷ ಪ್ರವೀಣ್ ಕೊರಿಯಾ, ರವಿಪ್ರಕಾಶ್, ಅಜೇಯ ಕುಮಾರ್ ಕಪ್ಪೆಟ್ಟು, ರಾಕೇಶ್ ಶೆಟ್ಟಿ ತುಮಕೂರು, ರಾಘವೇಂದ್ರ ಪಾಟೀಲ್, ಕ್ರೀಡಾ ಕಾರ್ಯದರ್ಶಿ ಅಶೋಕ್ ಪುತ್ರನ್, ಕೋಶಾಧಿಕಾರಿ ರಮೇಶ್ ಎಳ್ಳೂರು ಉಪಸ್ಥಿತರಿದ್ದರು. ವೀಕ್ಷಣೆ ವರದಿಯಲ್ಲಿ ರಾಜ್‌ಶೇಖರ್ ಸಹಕರಿಸಿದರು

ಛಾಯಾ ವೃತ್ತಿಯಲ್ಲಿ ಕಾರ್ಯ ನಿರ್ವಹಿಸಿದ ಮಹಿಳೆಯರನ್ನು ಈ ಸಂದರ್ಭ ದಲ್ಲಿ ಗೌರವಿಸಲಾಯಿತು. ಉಡುಪಿ ವಲಯಾಧ್ಯಕ್ಷ ಸುಧೀರ್ ಎಂ. ಶೆಟ್ಟಿ ಸ್ವಾಗತಿಸಿದರು. ರಾಘವ್ ಸೇರಿಗಾರ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ದಿವಾಕರ ಹಿರಿಯಡಕ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News