×
Ad

ಪಡುಕೆರೆ ಬೀಚ್ ಸ್ವಚ್ಛತಾ ಕಾರ್ಯಕ್ರಮ

Update: 2025-03-25 18:33 IST

ಉಡುಪಿ, ಮಾ.25: ವಿವೇಕಾನಂದ ಯೋಗ ಕೇಂದ್ರ ಪುತ್ತೂರು ಶಾಖೆಯ ಯೋಗಾರ್ಥಿಗಳು ಗುರು ಸತೀಶ್ ಕುಂದರ್ ನೇತೃತ್ವದಲ್ಲಿ ಪಡುಕೆರೆ ಬೀಚ್ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಬಳಿಕ ಮಾತನಾಡಿದ ಸತೀಶ್ ಕುಂದರ್ ಮಾತನಾಡಿ, ನಮ್ಮ ವೈಯಕ್ತಿಕ ಸ್ವಾಸ್ಥ್ಯ ಸಂರಕ್ಷಣೆಗಾಗಿ ಪ್ರತಿ ನಿತ್ಯ ಯೋಗ ಮಾಡುವುದರೊಂದಿಗೆ ನಾವು ಜೀವಿಸುವ ಸಮಾಜದ ಸ್ವಾಸ್ಥ್ಯಕ್ಕಾಗಿ ಇಂತಹ ಪರಿಸರ ಸ್ವಚ್ಛತಾ ಕಾರ್ಯಕ್ರಮಗಳನ್ನು ಕನಿಷ್ಠ ತಿಂಗಳಿಗೆ ಒಂದು ದಿನವಾದರೂ ಹಮ್ಮಿಕೊಂಡು ಇತರರಿಗೆ ಮಾದರಿಯಾಗ ಬೇಕು ಎಂದು ತಿಳಿಸಿದರು.

ಈ ಸಂದರ್ಭ ಯೋಗ ಶಿಕ್ಷಕಿ ಸುನೀತಾ ಚೈತನ್ಯ, ಯೋಗ ಬಂಧುಗಳಾದ ಲಕ್ಷ್ಮಿ ಟೀಚರ್, ಶಕುಂತಲಾ ಶೆಟ್ಟಿ, ಅನುಪಮಾ, ರಾಜೇಶ್ವರಿ ಭಟ್, ಸುನೀತಾ ಶೆಟ್ಟಿ, ಪ್ರೇಮ, ಕವಿತಾ, ವೇದ ಶೆಟ್ಟಿ, ಶಾಂತ, ವಾಣಿ, ಸುಮಿತ್ರ, ಸುಭದ್ರ, ಶುಭ ಶೆಟ್ಟಿ, ರೂಪ, ಮಮತಾ, ಶ್ವೇತಾ ಶೆಟ್ಟಿ, ಭಾರತಿ, ಸುಜಾತ, ಗುಲಾಬಿ, ವಿಜಯ ಲಕ್ಷ್ಮಿ ಶೆಟ್ಟಿ, ಮಾಲತಿ ಭರತ್‌ರಾಜ್, ನೀತ ಶೆಟ್ಟಿ, ಸಂಧ್ಯಾ ಶೆಟ್ಟಿ, ಮಾಲತಿ ಶೆಟ್ಟಿ, ಸಂಧ್ಯಾ ಶೇಟ್, ಚಿತ್ರ ಕಲಾ, ಗಾಯತ್ರಿ ಭಟ್, ಶ್ರೀಲಕ್ಷ್ಮೀ, ಕುಶಲ ಶೆಟ್ಟಿ, ರಾಜೇಶ್ವರಿ ಶೇಟ್, ಚಂದ್ರಪ್ರತಿಮಾ, ಪ್ರೇರಣಾ, ಯಶವಂತ್, ಮನೀಶ್ ಮುಂತಾದವರು ಉಪಸ್ಥಿತರಿದ್ದರು. ಸುಮಾರು ಒಂದು ಗಂಟೆಗಳ ಕಾಲ ಪಡುಕೆರೆ ಬೀಚ್‌ಅನ್ನು ಸ್ವಚ್ಛಗೊಳಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News