×
Ad

ಸುಮೇಧಾ ಫ್ಯಾಶನ್ ಇನ್ಸ್ಟಿಟ್ಯೂಟ್ ವತಿಯಿಂದ ಉಚಿತ ಫ್ಯಾಶನ್ ಡಿಸೈನಿಂಗ್ ಶಿಬಿರ

Update: 2025-04-03 20:13 IST

ಕಾರ್ಕಳ : ಸುಮೇಧಾ ಫ್ಯಾಶನ್ ಇನ್ಸ್ಟಿಟ್ಯೂಟ್ ವತಿಯಿಂದ ಕಾರ್ಕಳ ಮೀರಾ ಕಾಮತ್ ಸ್ಮರಣಾರ್ಥ ಕಾಲೇಜು ವಿಧ್ಯಾರ್ಥಿಗಳಿಗೆ ಕಾರ್ಕಳ ಎಸ್ ಜೆ ಆರ್ಕೆಡ್ ನ ಸುಮೇಧಾ ಫ್ಯಾಶನ್ ಇನ್ಸ್ಟಿಟ್ಯೂಟ್ ನಲ್ಲಿ ನಡೆದ 8 ದಿನಗಳ ಉಚಿತ ಫ್ಯಾಶನ್ ಡಿಸೈನಿಂಗ್ ಶಿಬಿರವನ್ನು  ಚಾರ್ಟ್ಡರ್ಡ್ ಅಕೌಂಟೆಂಟ್ ಕೆ ಕಮಲಾಕ್ಷ ಕಾಮತ್ ಉಧ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬೇಕು. ಸ್ವಾವಲಂಬಿ ಬದುಕಿಗೆ ಸ್ವ ಉದ್ಯೋಗ ಅತ್ಯಗತ್ಯ. ಸ್ವ ಉದ್ಯೋಗಕ್ಕೆ ಫ್ಯಾಶನ್ ಡಿಸೈನಿಂಗ್ ನಂತಹ ವ್ರತ್ತಿಪರ ಶಿಕ್ಷಣ ಅನುಕೂಲಕರವಾಗುತ್ತದೆ ಎಂದರು.

ಕಾರ್ಕಳ ಎಸ್ ವಿ ಟಿ ವನಿತಾ ಶಾಲೆ ಪ್ರಾಂಶುಪಾಲರಾದ ಯೋಗೇಂದ್ರ ನಾಯಕ್ ,ಮಾತನಾಡಿ ಮಹಿಳೆಯರು ಕೇವಲ ಸ್ವಾವಲಂಬಿಗಳಾದರೆ ತಾವು ಮಾತ್ರವಲ್ಲ ತಮ್ಮ ಕುಟುಂಬವು ಕೂಡ ಒಳ್ಳೆಯ ಜೀವನ ನಡೆಸಬಹುದು ಮಾತ್ರವಲ್ಲದೆ ಪ್ರೀತಿ ವಿಶ್ವಾಸದಿಂದ ಸಂಪತ್ಭರಿತ ಜೀವನ ನಡೆಸಬಹುದು ಎಂದರು.

ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ದೇವದಾಸ ಕೆರೆಮನೆ ಸಾಂದರ್ಭಿಕವಾಗಿ ಮಾತನಾಡಿ ಶುಭ ಹಾರೈಸಿದರು. ಸುಮೇಧಾ ಫ್ಯಾಶನ್ ಇನ್ಸ್ಟಿಟ್ಯೂಟ್ ಸಂಸ್ಥಾಪಕಿ ಸಾಧನ ಆಶ್ರೀತ್ ಸ್ವಾಗತಿಸಿ ಪ್ರಸ್ತಾವನೆಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News