ಕೊರಗ ಮಹಿಳೆಯರ ಪಾರಂಪರಿಕ ಕರಕುಶಲ-ವಿನ್ಯಾಸ ತರಬೇತಿ ಉದ್ಘಾಟನೆ
Update: 2025-04-23 19:42 IST
ಬೈಂದೂರು, ಎ.23: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಆಶ್ರಯ ದಲ್ಲಿ ಆ್ಯಕ್ಷನ್ ಎಯ್ಡ್ ಅಸೋಸಿಯೇಷನ್ ಬೆಂಗಳೂರು ಇವರ ಸಹಯೋಗದಲ್ಲಿ ವೆಕ್ಟರ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಕುಂದಾಪುರದ ನಾಡದಲ್ಲಿ ನಡೆಯಲಿರುವ 2 ತಿಂಗಳ ’ಕೊರಗ ಮಹಿಳೆಯರ ಪಾರಂಪರಿಕ ಕರಕುಶಲ ಮತ್ತು ವಿನ್ಯಾಸ ತರಬೇತಿ’ ಉದ್ಘಾಟನೆ ನಾಡ ಕೊರಗ ಸಮುದಾಯ ಭವನದಲ್ಲಿ ಮಂಗಳವಾರ ನಡೆಯಿತು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಕೊರಗ ಸಮುದಾಯದ ಡೋಲು ವಾದನದ ಮೂಲಕ ಕಾರ್ಯಗಾರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಶಾಸಕರು, ಸಮುದಾಯದ ಕಲೆ-ಕೌಶಲ್ಯಗಳಿಗೆ ಪೂರಕವಾಗಿ ತನ್ನ ಸಂಪೂರ್ಣ ಸಹಕಾರದ ಭರವಸೆ ನೀಡಿ ಕುಲಕಸುಬಿನ ಉತ್ಪನ್ನಗಳ ವ್ಯವಸ್ಥಿತ ಮಾರುಕಟ್ಟೆಗೆ ಕೊಲ್ಲೂರು ದೇವಸ್ಥಾನದ ಬಳಿ ಶಾಶ್ವತ ಅಂಗಡಿ ಕೋಣೆ ವ್ಯವಸ್ಥೆ ಮಾಡಿಕೊಡುವುದಾಗಿ ಘೋಷಿಸಿದರು.