×
Ad

ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

Update: 2025-04-25 19:30 IST

ಉಡುಪಿ, ಎ.26: ಉಡುಪಿಯ ರಾಜಾಂಗಣದಲ್ಲಿ ಎ.30 ಮತ್ತು ಮೇ 1ರಂದು ನಡೆಯಲಿರುವ 17ನೇ ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಇಂದು ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಶ್ರೀಕೃಷ್ಣ ಮಠ ಅಂದಿನಿಂದ ಇಂದಿನವರೆಗೂ ಕನ್ನಡ ನಾಡು ನುಡಿಗೆ ಪ್ರೋತ್ಸಾಹಿಸಿಕೊಂಡು ಬಂದಿದೆ. ದಾಸವರೆಣ್ಯರಾದ ಪುರಂದರ ಮತ್ತು ಕನಕದಾಸರ ಕೀರ್ತನೆಗಳಿಗೆ ಪ್ರೇರಣೆಯಾಗುವುದರೊಂದಿಗೆ ಹಲವು ಧಾರ್ಮಿಕ, ಸಾಂಸ್ಕ್ಥತಿಕ ಕೊಡುಗೆಗಳನ್ನು ಕನ್ನಡ ನಾಡು ನುಡಿಗೆ ಮಠ ನೀಡಿದೆ. ನಮ್ಮ ಪುತ್ತಿಗೆ ಮಠವು ಕೂಡ ಈ ವಿಚಾರದಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಮಠದ ಪತ್ರಿಕೆ ಸುಗುಣಮಾಲಾ ಪ್ರತಿಕೆ ರಾಜ್ಯದಾದ್ಯಂತ ಜನಪ್ರೀಯ ವಾಗಿರುವುದು ಪತ್ರಿಕಾ ಲೋಕಕ್ಕೆ ಹೆಮ್ಮೆಯ ಸಂಗತಿ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವ ಅಧ್ಯಕ್ಷ ಪ್ರದೀಪ್ ಕಲ್ಕೂರ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಗೌರವ ಕಾರ್ಯದರ್ಶಿಗಳಾದ ಸುಬ್ರಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟ ಕೋಶಾಧ್ಯಕ್ಷ ಪಿ.ಮನೋಹರ್ ಭಟ್, ಭವನಪ್ರಸಾದ್ ಹೆಗ್ಡೆ, ಸಂಘಟನಾ ಕಾರ್ಯದರ್ಶಿಗಳಾದ ಪಿ.ವಿ.ಆನಂದ ಸಾಲಿಗ್ರಾಮ, ಸತೀಶ್ ವಡ್ಡರ್ಸೆ, ಜೊತೆ ಕಾರ್ಯದರ್ಶಿ ಡಾ.ರಘು ನಾಯ್ಕ, ಕಸಾಪ ತಾಲೂಕು ಅಧ್ಯಕ್ಷರುಗಳಾದ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ, ಪುಂಡಲೀಕ ಮರಾಠೆ, ರಾಮಚಂದ್ರ ಐತಾಳ್, ಶ್ರೀನಿವಾಸ ಭಂಡಾರಿ, ಪದಾಧಿಕಾರಿಗಳಾದ ಜ್ಯೋತಿ ಪೂಜಾರಿ, ಅಚ್ಯುತ ಪೂಜಾರಿ, ಮಾಧ್ಯಮ ವಕ್ತಾರ ನರಸಿಂಹ ಮೂರ್ತಿ ರಾವ್, ಮಂಜುನಾಥ ಕುಲಾಲ್, ಡಾ.ಪ್ರವೀಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News