×
Ad

ಮಣ್ಣು ಜೀವನದ ಮೂಲ ಅಡಿಪಾಯ: ಸಬ್ಯತ್ ಶೆಟ್ಟಿ

Update: 2025-04-25 19:38 IST

ಉಡುಪಿ, ಎ.25: ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಐಎಸ್‌ಟಿ ಘಟಕ ಮತ್ತು ರಾಷ್ಟ್ರಿಯ ಸೇವಾ ಯೋೀಜನೆಯು ಮೂಲ ವಿಜ್ಞಾನ ವಿಭಾಗದ ಸಹಯೋಗದೊಂದಿಗೆ ವಿಶ್ವ ಭೂಮಿ ದಿನದ ಅಂಗವಾಗಿ ಉಪನ್ಯಾಸ ಕಾರ್ಯಕ್ರಮವನ್ನು ಎ.22ರಂದು ಆಯೋಜಿಲಾಗಿತ್ತು.

ಸಂಪನ್ಮೂಲ ವ್ಯಕ್ತಿಯಾಗಿ ಭೂಮಿ ಸಾರ ಮಣ್ಣಿನ ರಕ್ಷಣೆ ಮತ್ತು ಸಂರಕ್ಷಣೆ ಎಂಬ ವಿಷಯದ ಕುರಿತು ಮಾತನಾಡಿದ ಇಷಾ ಫೌಂಡೇಶನ್‌ನ ಸ್ವಯಂ ಸೇವಕ ಸಬ್ಯತ್ ಶೆಟ್ಟಿ, ಮಣ್ಣು ಜೀವನದ ಮೂಲ ಅಡಿಪಾಯವಾಗಿದ್ದು, ಗಿಡಗಳ ಬೆಳವಣಿಗೆ, ಕಾರ್ಬನ ಸಂಗ್ರಹಣೆ, ನೀರಿನ ಶುದ್ದೀಕರಣ ಮತ್ತು ಜೀವ ವೈವಿಧ್ಯಗಳಿಗೆ ಆಶ್ರಯ ನೀಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ತಟಸ್ಥ ಕೃಷಿ, ವನ ಸಂರಕ್ಷಣೆ, ರಾಸಾಯನಿಕ ಬಳಕೆ ಕಡಿಮೆ ಮಾಡುವಂತಹ ಪರಿಸರ ಸ್ನೇಹಿ ಅಭ್ಯಾಸಗಳನ್ನು ಅನುಸರಿಸುವ ಅಗತ್ಯೆತೆ ಇದೆ. ಮಣ್ಣಿನ ರಕ್ಷಣೆಯು ಆಹಾರ ಭದ್ರತೆ, ಹವಾಮಾನ ವೈಪರೀತ್ಯ ಮತ್ತು ಪರಿಸರ ಆರೋಗ್ಯ ಕಾಪಾಡುವಲ್ಲಿ ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದರು.

ಐಎಸ್‌ಟಿಇ ಘಟಕದ ಸಂಯೋಜಕಿ ಶಶಿಕಲಾ ಆರ್. ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕ ಸಚಿನ್ ಪ್ರಭು ಕಾರ್ಯಕ್ರಮ ಸಂಯೋಜಿಸಿ ದರು. ವಿದ್ಯಾರ್ಥಿನಿ ಪ್ರೇರಣಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News