×
Ad

ಟ್ರಕ್‌ನಿಂದ ರಸ್ತೆಗೆ ಉರುಳಿ ಬಿದ್ದ ಬೃಹತ್ ಟ್ಯಾಂಕ್

Update: 2025-06-05 22:22 IST

ಉಡುಪಿ, ಜೂ.5: ಉಡುಪಿ ಕಿನ್ನಿಮುಲ್ಕಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟ್ರಕ್‌ನಿಂದ ಬೃಹತಾಕಾದ ಟ್ಯಾಂಕ್ ಮಾದರಿಯ ಯಂತ್ರವೊಂದು ರಸ್ತೆಗೆ ಉರುಳಿ ಬಿದ್ದಿದ್ದು, ಇದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿರುವ ಬಗ್ಗೆ ವರದಿಯಾಗಿದೆ.

ಕುಂದಾಪುರ- ಮಂಗಳೂರು ಕಡೆ ಹೋಗುತ್ತಿದ್ದ ಟ್ರಕ್, ಕಿನ್ನಿಮುಲ್ಕಿ ಸರ್ವಿಸ್ ರಸ್ತೆಯ ಸಮೀಪದ ರಸ್ತೆ ಸೂಚನಾ ಫಲಕ ಅಡ್ಡ ಬಂದ ಕಾರಣ ಮುಂದೆ ಸಾಗಲು ಸಾಧ್ಯವಾಗದೆ ರಸ್ತೆ ಬದಿಯಲ್ಲೇ ನಿಂತಿತ್ತು. ಎರಡು ದಿನ ಅಲ್ಲೇ ನಿಲ್ಲಿಸಿದ್ದ ಚಾಲಕ, ಟ್ರಕ್ ಅನ್ನು ರಿವರ್ಸ್ ತೆಗೆದು ಬೇರೆ ರೂಟ್‌ನಲ್ಲಿ ಹೋಗಲು ಪ್ರಯತ್ನ ಮಾಡಿದ್ದಾನೆ.

ಈ ಸಂದರ್ಭ ಭಾರೀ ಗಾತ್ರದ ಟ್ಯಾಂಕ್ ರಸ್ತೆಗೆ ಉರುಳಿ ಬಿದ್ದಿದೆ. ಇದರಿಂದ ಸರ್ವಿಸ್ ರಸ್ತೆಯಿಂದ ಬಂದು ಹೆದ್ದಾರಿಗೆ ಹೋಗುವ ವಾಹನಗಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಸ್ಥಳಕ್ಕೆ ಆಗಮಿಸಿರುವ ಉಡುಪಿ ಟ್ರಾಫಿಕ್ ಪೊಲೀಸರು ಟ್ರಕ್ ಚಾಲಕನಿಗೆ ಕೂಡಲೇ ತೆರವು ಮಾಡುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News