ಬಸ್ಸು ಢಿಕ್ಕಿ: ವೃದ್ಧ ಮೃತ್ಯು
Update: 2025-06-12 22:02 IST
ಹೆಬ್ರಿ, ಜೂ.12: ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತಿದ್ದ ವೃದ್ಧರೊಬ್ಬರು, ಅತಿವೇಗದಿಂದ ಬಂದ ಬಸ್ಸೊಂದು ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ಬುಧವಾರ ಸಂಜೆ ಹೆಬ್ರಿ ಪೇಟೆಯ ಬಡಕ್ಕಿಲ್ಲಾಯ ಹೊಟೇಲ್ ಬಳಿ ನಡೆದಿದೆ. ಮೃತರನ್ನು ಹೆಬ್ರಿಯ ಪ್ಲಾಟ್‌ನಲ್ಲಿ ವಾಸವಾಗಿರುವ ಶಂಕರ್ (71) ಎಂದು ಗುರುತಿಸಲಾಗಿದೆ.
ಶಿವಮೊಗ್ಗ ಕಡೆಯಿಂದ ವೇಗವಾಗಿ ಬಂದ ಬಸ್ಸು, ಚಾಲಕನ ನಿರ್ಲಕ್ಷತನದ ಚಾಲನೆಯಿಂದ ರಸ್ತೆಯ ತೀರಾ ಎಡಭಾಗಕ್ಕೆ ಬಂದು ಫುಟ್‌ಪಾತ್ ಮೇಲೆ ನಡೆದುಕೊಂಡು ಹೋಗುತಿದ್ದ ಶಂಕರ್ ಅವರಿಗೆ ಡಿಕ್ಕಿ ಹೊಡೆ ದಿತ್ತು. ಇದರಿಂದ ತೀವ್ರವಾಗಿ ಗಾಯಗೊಂಡು ಮಣ್ಣಿನ ರಸ್ತೆಗೆ ಬಿದ್ದ ಶಂಕರ್ ಅವರ ಆಸ್ಪತ್ರೆಗೆ ಕೊಂಡೊ ಯ್ದಿದ್ದು, ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೇ 7ಗಂಟೆ ಸುಮಾರಿಗೆ ಮೃತಪಟ್ಟರು. ಹೆಬ್ರಿ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.