ಉಡುಪಿ: ವಕ್ಫ್ ಸಂಸ್ಥೆಗಳ ಮಾಹಿತಿ ಸಂಗ್ರಹಕ್ಕೆ ತಾಲೂಕು ಮಟ್ಟದ ಕಾರ್ಯಾಗಾರ
ಉಡುಪಿ, ಜೂ.15: ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸಭೆಯು ಸಮಿತಿ ಅಧ್ಯಕ್ಷ ಸಿ.ಎಚ್.ಅಬ್ದುಲ್ ಮುತ್ತಾಲಿ ವಂಡ್ಸೆ ಅಧ್ಯಕ್ಷತೆಯಲ್ಲಿ ಜೂ.12ರಂದು ಮಣಿಪಾಲ ರಜತಾದ್ರಿಯಲ್ಲಿರುವ ಉಡುಪಿ ಜಿಲ್ಲಾ ವಕ್ಫ್ ಕಚೇರಿಯಲ್ಲಿ ಜರಗಿತು.
ಸಭೆಯಲ್ಲಿ ವಕ್ಫ್ ಸಂಬಂಧಿತ ವಿಚಾರಗಳ ಬಗ್ಗೆ ಚರ್ಚಿಸಿ ಸಲಹೆಗಳನ್ನು ನೀಡ ಲಾಯಿತು. ವಕ್ಫ್ ಸಂಸ್ಥೆಗಳ ಬೈಲಾ, ಕಮಿಟಿ, ವಕ್ಫ್ ಆಸ್ತಿಗಳ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸುವ ಸಲುವಾಗಿ ಉಡುಪಿ ಜಿಲ್ಲೆಯಲ್ಲಿ ತಾಲೂಕು ಮಟ್ಟದ ಕಾರ್ಯಾಗಾರವನ್ನು ವಕ್ಫ್ ಸಿಬ್ಬಂದಿಗಳ ಸಹಕಾರದೊಂದಿಗೆ ನಡೆಸಲು ತೀರ್ಮಾನಿಸಲಾಯಿತು.
ಜೂ.24ರಂದು ಬೈಂದೂರು ತಾಲೂಕು- ನಾವುಂದ ಎಂಜೆಎಂ ಮರವಂತೆ ಹಾಲ್, ಜು.1ರಂದು ಕುಂದಾಪುರ ತಾಲೂಕು- ಕುಂದಾಪುರ ಜಾಮೀಯ ಮಸೀದಿ, ಜು.8ರಂದು ಕಾಪು ತಾಲೂಕು- ಕನ್ನಂಗಾರ್ ಸಮುದಾಯ ಭವನ ಹೈಬಾ ಆಡಿಟೋರಿಯಂ, ಜು.5ರಂದು ಕಾರ್ಕಳ -ಹೆಬ್ರಿ ತಾಲೂಕು- ಕಾರ್ಕಳ ಜಾಮೀಯ ಮಸೀದಿ ಹಾಲ್, ಜು.22ರಂದು ಬ್ರಹ್ಮಾವರ ತಾಲೂಕು- ಬ್ರಹ್ಮಾವರ ಮದರ್ ಪ್ಯಾಲೇಸ್ ಮಿನಿ ಹಾಲ್, ಜು.29ರಂದು ಉಡುಪಿ ತಾಲೂಕು- ಇಂದ್ರಾಳಿ ನೂರಾನಿ ಮಸೀದಿಯಲ್ಲಿ ಕಾರ್ಯಾಗಾರವನ್ನು ನಡೆಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ಸಭೆಯಲ್ಲಿ ಸದಸ್ಯರಾದ ಮನ್ಸೂರು ನಾವುಂದ, ಆಸೀಫ್ ಕಟಪಾಡಿ, ಇಜಾಝ್ ಶರೀಫ್ ಕಾಕಳ, ಅಬ್ದುಲ್ ಖಾಲಿಕ್ ಕಾರ್ಕಳ, ಅಬ್ದುಲ್ ರಹಿಮಾನ್ ಕನ್ನಂಗಾರ್, ಹಮೀದ್ ಯೂಸುಫ್ ಮೂಳೂರು, ಅಬೂಬಕ್ಕರ್ ಹಸೈನಾರ್ ಮಾವಿನಕಟ್ಟೆ, ಎ.ಕೆ.ಯೂಸುಫ್ ಕುಂದಾಪುರ, ಶೇಖ್ ಫಯಾಝ್, ಜಿಲ್ಲಾ ವಕ್ಫ್ ಅಧಿಕಾರಿ ನಾಝಿಯಾ ಉಪಸ್ಥಿತರಿದ್ದರು.