×
Ad

ಮಂಗಳೂರು: ವಿಮಾನ ದುರಂತದಲ್ಲಿ ಮೃತಪಟ್ಟವರಿಗಾಗಿ ಸಾಮೂಹಿಕ ಪ್ರಾರ್ಥನೆ

Update: 2025-06-16 18:24 IST

ಮಂಗಳೂರು: ಅಹಮದಾಬಾದ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ವಿಮಾನ ದುರ್ಘಟನೆಯಲ್ಲಿ ಬಲಿಯಾದ ಭಾರತದ ಹಾಗೂ ವಿದೇಶೀ ಪ್ರಯಾಣಿಕರ ಆತ್ಮ ಸದ್ಗತಿಗಾಗಿ ಹಾಗೂ ಅವರ ಕುಟುಂಬ ಸದಸ್ಯರ ಸಾಂತ್ವನ ಬಯಸಿ ಸಾಮೂಹಿಕ ಪ್ರಾರ್ಥನೆ ಸಹಿತ ರುದ್ರ ಪಾರಾಯಣ ಹಾಗೂ ವಿಷ್ಣು ಸಹಸ್ರನಾಮ ಪಠನ ಸೋಮವಾರ ಬೆಳಗ್ಗೆ ಶರವು ಮಹಾಗಣಪತಿ ದೇವಳದ ಪ್ರಾಂಗಣದಲ್ಲಿ ನಡೆಸಲಾಯಿತು.

ಕಲ್ಕೂರ ಪ್ರತಿಷ್ಠಾನದ ಆಯೋಜಕತ್ವದಲ್ಲಿ ವಿಪ್ರ ಸಮಾಜ ಬಾಂಧವರಿಂದ ಶರವು ರಾಘವೇಂದ್ರ ಶಾಸ್ತ್ರಿ, ಡಾ.ಪ್ರಭಾಕರ ಅಡಿಗ ಕದ್ರಿ, ಜಯರಾಮ ಭಟ್ ಡೊಂಗರಕೇರಿ ಅವರ ಮಾರ್ಗದರ್ಶನ ಹಾಗೂ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ  ಪ್ರದೀಪ ಕುಮಾರ ಕಲ್ಕೂರ ಮುಂದಾಳತ್ವದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು

ವೇದ ವಿದ್ವಾಂಸ ಕದ್ರಿಯ ಡಾ. ಪ್ರಭಾಕರ ಅಡಿಗ ರವರು ವಿಶೇಷವಾಗಿ ರುದ್ರ ಪಾರಾಯಣ ಮತ್ತು ವಿಷ್ಣು ಸಹಸ್ರನಾಮ ಪಠಣದ ಪ್ರಯೋಜನ ಮತ್ತು ಮೃತಪಟ್ಟವರ ಆತ್ಮಕ್ಕೆ ಮತ್ತು ಅವರ ಕುಟುಂಬಕ್ಕೆ ವೇದ ಮಂತ್ರವು ಯಾವ ರೀತಿಯಲ್ಲಿ ಸಹಕಾರಿಯಾಗುವುದು ಎಂಬುದನ್ನು ವಿವರಿಸಿದರು.

ಈ ಸಂದರ್ಭ ರಾಹುಲ್ ಶಾಸ್ತ್ರಿ, ಎಸ್.ವಿ ಪ್ರಭಾಕರ ಶರ್ಮ, ಸುಧಾಕರ ರಾವ್ ಪೇಜಾವರ, ರಘುರಾಮ ರಾವ್, ಡಾ.ಬಿ.ರಾಜೇಂದ್ರ ಪ್ರಸಾದ್, , ರಾಮಚಂದ್ರ ಭಟ್ ಎಲ್ಲೂರು, ಪೂರ್ಣಿಮಾ ಪ್ರಭಾಕರ ಪೇಜಾ ವರ, ಚಂದ್ರಶೇಖರ ಮಯ್ಯ,ಗಣೇಶ ಹೆಬ್ಬಾರ್, ಶೇಷಾದ್ರಿ ಭಟ್, ಅನಿಲ್ ರಾವ್, ಗಣೇಶ ಭಟ್ ಶರವು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News