ಚಡಗ ಕಾದಂಬರಿ ಪ್ರಶಸ್ತಿಗೆ ಅರ್ಹ ಕಾದಂಬರಿಗಳಿಗೆ ಆಹ್ವಾನ
Update: 2025-06-17 18:02 IST
ಉಡುಪಿ, ಜೂ.17: ಕೋಟೇಶ್ವರದ ಎನ್.ಎ.ಎಚ್.ಪ್ರಕಾಶನ ಮತ್ತು ಸ್ಥಿತಿಗತಿ ತ್ರೈಮಾಸಿಕ ಪತ್ರಿಕೆಗಳ ಆಶ್ರಯದಲ್ಲಿ ಕಾದಂಬರಿಕಾರ, ಸಂಘಟಕ ದಿ.ಪಾಂಡೇಶ್ವರ ಸೂರ್ಯನಾರಾಯಣ ಚಡಗರ ನೆನಪಿನಲ್ಲಿ ಕೊಡುವ ಹದಿನಾರನೆಯ ವರ್ಷದ ಕಾದಂಬರಿ ಪ್ರಶಸ್ತಿಗೆ 2024ರ ಪ್ರಥಮ ಆವೃತ್ತಿಯಾಗಿ ಪ್ರಕಟವಾದ ಕಾದಂಬರಿಗಳನ್ನು ಲೇಖಕ/ಪ್ರಕಾಶಕರಿಂದ ಆಹ್ವಾನಿಸಿದೆ.
ಆಸಕ್ತರು ತಮ್ಮ ಕೃತಿಯ ಮೂರು ಪ್ರತಿಗಳನ್ನು ಸ್ಪರ್ಧೆಯ ಸಂಚಾಲಕ ಪ್ರೊ.ಉಪೇಂದ್ರ ಸೋಮಯಾಜಿ, ಶ್ರೀಚಿತ್ರಪಾಡಿ, ಅಂಚೆ: ಸಾಲಿಗ್ರಾಮ, ಉಡುಪಿ ಜಿಲ್ಲೆ -575225 (9740842722) ಇವರಿಗೆ ಆ.30ರೊಳಗೆ ತಲುಪುವಂತೆ ಕಳುಹಿಸಿಕೊಡಬಹುದು. ನವೆಂಬರ್ ತಿಂಗಳಲ್ಲಿ ಸಾರ್ವಜನಿಕ ಸಮಾರಂಭ ದಲ್ಲಿ ಪ್ರದಾನಗೊಳ್ಳಲಿರುವ ಈ ಪ್ರಶಸ್ತಿಯು, ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ 10 ಸಾವಿರ ರೂ. ನಗದನ್ನು ಒಳಗೊಂಡಿದೆ ಎಂದು ಪ್ರಶಸ್ತಿ ಸಮಿತಿಯ ಅಧ್ಯಕ್ಷ ಡಾ.ಭಾಸ್ಕರಾಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.