×
Ad

ಆನ್‌ಲೈನ್ ಮೂಲಕ ನಕಲಿ ನೀಟ್ ಅಂಕಪಟ್ಟಿ: ಪ್ರಕರಣ ದಾಖಲು

Update: 2025-06-20 22:28 IST

ಉಡುಪಿ, ಜೂ.20: ಉಡುಪಿ ವಿದ್ಯಾರ್ಥಿಯಿಂದ ಸಾವಿರಾರು ರೂ. ಹಣ ಪಡೆದು ಆನ್ ಲೈನ್ ಮೂಲಕ ನಕಲಿ ನೀಟ್ ಅಂಕಪಟ್ಟಿ ನೀಡಿ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿಯ ಡಾ.ರೋಶನ್ ಕುಮಾರ್ ಶೆಟ್ಟಿ ಅವರ ಮಗ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು ಇತ್ತೀಚೆಗೆ ಎನ್ಟಿಎಯಿಂದ ನಡೆದ ನೀಟ್ ಪರೀಕ್ಷೆಯನ್ನು ಬರೆದಿದ್ದರು. ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವಾಗ ಎಡಿಟಿಂಗ್ ಮಾಸ್ಟರ್ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ರಾಷ್ಟ್ರೀಯ ಮಟ್ಟದ ನೀಟ್, ಜೆಇಇ ಮತ್ತು ಸಿಬಿಎಸ್ಇ ಪರೀಕ್ಷೆಗಳ ಫಲಿತಾಂಶಗಳನ್ನು ಡಿಜಿಟಲ್ ರೂಪದಲ್ಲಿ ಬದಲಾಯಿಸುವ ಬಗ್ಗೆ ವಿಡಿಯೋಗಳು ಇದ್ದವು.

ಈ ಯೂಟ್ಯೂಬ್ ಚಾನೆಲ್ ನಲ್ಲಿದ್ದ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿದಾಗ ಆ ವ್ಯಕ್ತಿ ತನ್ನನ್ನು ವಿಷು ಕುಮಾರ್ ಎಂದು ಪರಿಚಯಿಸಿಕೊಂಡಿದ್ದನು. ನಂತರ ವಿದ್ಯಾರ್ಥಿಗೆ ನೀಟ್ ಅಂಕ ಪಟ್ಟಿ ಹಾಗೂ ಓಎಂಆರ್ ನೀಡುವುದಾಗಿ ತಿಳಿಸಿ 17,000ರೂ.ಗಳನ್ನು ವರ್ಗಾಯಿಸಿ ಕೊಂಡು ಡಿಜಿಟಲ್ ಆಗಿ ನೀಟ್ ಪರೀಕ್ಷೆಯ ನಕಲಿ ಅಂಕ ಪಟ್ಟಿ ಹಾಗೂ ಓಎಂಆರ್ ಶೀಟ್ ವಾಟ್ಯಾಪ್ ಮೂಲಕ ಕಳುಹಿಸಿಕೊಟ್ಟಿದ್ದನು.

ಆರೋಪಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ನನ್ನ ಮಗನಿಗೆ ವಂಚಿಸಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿಕೊಂಡಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಡಾ.ರೋಶನ್ ಕುಮಾರ್ ಶೆಟ್ಟಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News