ಗೋಮಾಂಸ ಸಾಗಾಟ ಆರೋಪ: ಓರ್ವನ ಬಂಧನ
Update: 2025-06-21 21:48 IST
ಗಂಗೊಳ್ಳಿ, ಜೂ.21: ಸ್ಕೂಟರ್‌ನಲ್ಲಿ ಅಕ್ರಮವಾಗಿ ದನ ಮಾಂಸ ಸಾಗಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಗಂಗೊಳ್ಳಿ ಪೊಲೀಸರು ಜೂ.21ರಂದು ಹೊಸಾಡು ಗ್ರಾಮದ ಗುಹೇಶ್ವರ ದೇವಸ್ಥಾನಕ್ಕೆ ಹೋಗುವ ಕ್ರಾಸ್ ರಸ್ತೆಯಲ್ಲಿ ಬಂಧಿಸಿದ್ದಾರೆ.
ಗಂಗೊಳ್ಳಿ ಮೀನು ಮಾರ್ಕೆಟ್ ಬಳಿಯ ಅಬ್ದುಲ್ ರಹೀಮ್(35) ಬಂಧಿತ ಆರೋಪಿ. ಈತನಿಂದ ಸ್ಕೂಟರ್, 7500ರೂ. ಮೌಲ್ಯದ 25 ಕೆಜಿ ದನದ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂ.18ರಂದು ಕೆ.ಇ.ಬಿ ಕಚೇರಿ ಎದುರು ದನ ಕರುಗಳನ್ನು ಕಾರಿಗೆ ತುಂಬಿ ಕಳವಿಗೆ ಪ್ರಯತ್ನಿಸಿದ ಪ್ರಕರಣದಲ್ಲಿ ಈತ ಭಾಗಿಯಾಗಿರುವುದು ವಿಚಾರಣೆ ಯಲ್ಲಿ ತಿಳಿದು ಬಂದಿದೆ.