ಖ್ಯಾತ ಯಕ್ಷಗಾನ ಹಾಸ್ಯ ಕಲಾವಿದ ಮುಖ್ಯಪ್ರಾಣ ಕಿನ್ನಿಗೋಳಿ ನಿಧನ
Update: 2025-06-21 23:04 IST
ಉಡುಪಿ: ಖ್ಯಾತ ಯಕ್ಷಗಾನ ಹಾಸ್ಯ ಕಲಾವಿದರಾದ ಮುಖ್ಯಪ್ರಾಣ ಕಿನ್ನಿಗೋಳಿ ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 84 ವರ್ಷ ಪ್ರಾಯವಾಗಿತ್ತು.
ಮೃತರ ಅಂತಿಮ ದರ್ಶನ ನಾಳೆ ಬೆಳಿಗ್ಗೆ 10 ಗಂಟೆಯಿಂದ 12 ಗಂಟೆವರೆಗೆ ಅವರ ಸ್ವಗ್ರಹ ಉದಯಗಿರಿ, ಗೊಳಿಜೋರ, ಕಿನ್ನಿಗೋಳಿ ಇಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲ ತಿಳಿಸಿದೆ.
ಮೃತರು ಓರ್ವ ಪುತ್ರ ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.