×
Ad

ಕಂದಾಯ ಸಮಸ್ಯೆ| ಸಚಿವರನ್ನು ಕರೆಸಿ ಸಮಾಲೋಚನೆ: ಹೆಗ್ಡೆ ಸಲಹೆ

Update: 2025-06-22 18:44 IST

ಉಡುಪಿ: ಮಾತು ಕಡಿಮೆ ಮಾಡಿ, ಕೆಲಸ ಜಾಸ್ತಿ ಮಾಡಬೇಕು. ಬಿಜೆಪಿ ಕಾಲದಲ್ಲೇ ಜಾರಿಯಾದ 9/11 ಕಾನೂನನ್ನು ಇದೀಗ ಕಾಂಗ್ರೆಸ್ ಮೇಲೆ ಹೊರಿಸಲು ನೋಡುತಿದ್ದಾರೆ. ಇದನ್ನು ನಾವು ಜನರಿಗೆ ಮನ ವರಿಕೆ ಮಾಡಬೇಕು. ಅಕ್ರಮ ಸಕ್ರಮ, ಡೀಮ್ಡ್ ಪಾರೆಸ್ಟ್, ಕುಮ್ಕಿ ಜಾಗ, ಸಿಂಗಲ್ ಸೈಟ್ ಲೇಔಟ್ ಬಗ್ಗೆ ಸಮಸ್ಯೆಗಳನ್ನು ಪರಿಹರಿಸಲು ಕಂದಾಯ ಸಚಿವರನ್ನು ಜಿಲ್ಲೆಗೆ ಕರೆಸಿ ಸಮಾಲೋಚನೆ ಮಾಡಬೇಕಾಗಿದೆ ಎಂದು ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ಉಡುಪಿ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಜರಗಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪ್ರಾಸ್ತಾವಿಕವಾಗಿ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಕಾಂಗ್ರೆಸ್ ಪಕ್ಷದ ಮೇಲೆ ಜನರಿಗೆ ನಂಬಿಕೆ ವಿಶ್ವಾಸ ಬಂದಿದೆ. ಅದನ್ನು ಮುಂದುವರಿಸಿಕೊಂಡು ಇನ್ನು ಜನ ಸೇವೆ ಮಾಡಿ ಮುಂದೆ ಬರುವ ಜಿಪಂ, ತಾಪಂ, ಹಾಗೂ ನಗರಸಭಾ ಚುನಾವಣೆಯನ್ನು ನಾವು ಯಶಸ್ವಿಯಾಗಿ ಎದುರಿಸುವಂತಾಗಬೇಕು ಎಂದರು.

ಜೂ.23ರಂದು ಬಿಜೆಪಿ ಹಮ್ಮಿಕೊಂಡಿರುವ ಪ್ರತಿಭಟನೆಯನ್ನು ಸಮರ್ಥ ವಾಗಿ ಎದುರಿಸಲು ಅಂಕಿ ಅಂಶಗಳೊಂದಿಗೆ ಸಿದ್ದರಾಗುವ ಕುರಿತು ಸಭೆಯಲ್ಲಿ ನಿರ್ಧರಿಸಲಾಯಿತು. ಕಾಂಗ್ರೆಸ್ ಮುಖಂಡರಾದ ಉದಯ ಶೆಟ್ಟಿ ಮುನಿಯಾಲು, ಪ್ರಸಾದ್‌ರಾಜ್ ಕಾಂಚನ್, ದಿನೇಶ್ ಹೆಗ್ಡೆ ಮೊಳಹಳ್ಳಿ, ರಾಜು ಪೂಜಾರಿ, ಭುಜಂಗ ಶೆಟ್ಟಿ ಮೊದಲಾದವರು ಜನರ ಸಮಸ್ಯೆಗಳನ್ನು ಪರಿಹರಿಸಲು ಪಕ್ಷ ಮುಂದಾಗಬೇಕೆಂದರು.

ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಕಿಶನ್ ಹೆಗ್ಡೆ ಕೊಲ್ಕೆಬೈಲ್, ಶಿವರಾಮ ಶೆಟ್ಟಿ, ಮಲ್ಯಾಡಿ, ದಿನೇಶ್ ಪುತ್ರನ್, ವೆರೋನಿಕಾ ಕಾರ್ನೆಲಿಯೋ, ಬ್ಲಾಕ್ ಅಧ್ಯಕ್ಷರುಗಳಾದ ರಮೇಶ್ ಕಾಂಚನ್, ರಾಘವೆಂದ್ರ ಶೆಟ್ಟಿ, ಗೋಪಿನಾಥ್ ಭಟ್, ವೈ.ಸುಕುಮಾರ್, ಶುಭದರಾವ್, ಹರಿಪ್ರಸಾದ್ ಶೆಟ್ಟಿ, ಪ್ರಮುಖರಾದ ದಿನಕರ ಹೇರೂರು, ಹರಿಪ್ರಸಾದ್ ರೈ, ಪ್ರಖ್ಯಾತ್ ಶೆಟ್ಟಿ, ಕೀರ್ತಿ ಶೆಟ್ಟಿ, ಯತೀಶ್ ಕರ್ಕೇರ, ಕೃಷ್ಣ ಶೆಟ್ಟಿ ಬಜಗೋಳಿ, ಗೀತಾ ವಾಗ್ಲೆ, ಜ್ಯೋತಿ ಹೆಬ್ಬಾರ್, ಸೌರಭ ಬಲ್ಲಾಳ್, ಕೇಶವ ಕೋಟ್ಯಾನ್, ಕಿರಣ್ ಹೆಗ್ಡೆ, ಕಿಶೋರ್ ಎರ್ಮಾಳ್, ಸರಸು ಡಿ.ಬಂಗೇರ, ಚಂದ್ರಿಕಾ ಶೆಟ್ಟಿ, ಸುರೇಶ್ ಶೆಟ್ಟಿ ಬನ್ನಂಜೆ, ಸುರೇಂದ್ರ ರಾವ್, ಮಹಾಬಲ ಕುಂದರ್, ಬಿ.ನರಸಿಂಹ ಮೂರ್ತಿ, ಬಿಪಿನ್ ಚಂದ್ರಪಾಲ್, ಶರ್ಫುದ್ಧೀನ್, ರೋಶನ್ ಶೆಟ್ಟಿ, ಶೇಖ್ ವಹೀದ್, ಜಯಕುಮಾರ್, ಇಸ್ಮಾಯಿಲ್ ಆತ್ರಾಡಿ, ಸಂಧ್ಯಾ ತಿಲಕ್ರಾಜ್, ಬಾಲಕೃಷ್ಣ ಪೂಜಾರಿ, ಶಶಿಧರ ಶೆಟ್ಟಿ ಎಲ್ಲೂರು, ರೇವತಿ ಶೆಟ್ಟಿ, ಹಬೀಲ್ ಆಲಿ, ಮೀನಾಕ್ಷಿ ಮಾಧವ ಬನ್ನಂಜೆ, ಉಪಸ್ಥಿತರಿದ್ದರು.

ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಸಹಕಾರಿ ಕಾಂಗ್ರೆಸ್ ಅಧ್ಯಕ್ಷ ಕೆ.ಅಣ್ಣಯ್ಯ ಸೇರಿಗಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News