ಕುಂದಾಪುರ| ಭೂಮಿ ವಿಚಾರ: ತಹಶಿಲ್ದಾರನ್ನು ಭೇಟಿಯಾದ ದಸಂಸ ನಿಯೋಗ
ಕುಂದಾಪುರ, ಜೂ.23: ಭೂಮಿ ವಿಚಾರವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಾಲೂಕು ಸಮಿತಿ ಕುಂದಾಪುರ ನಿಯೋಗವು ಜೂ.23 ರಂದು ಕುಂದಾಪುರ ತಹಶಿಲ್ದಾರರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಪರಿಶಿಷ್ಟ ಜಾತಿ ಪಂಗಡಗಳ ಭೂಮಿ ಹಕ್ಕುಗಳ ಬಗ್ಗೆ ಮತ್ತು ಈಗಾಗಲೇ ಹೊಂದಿರುವ ಭೂಮಿಗಳ ದಾಖಲೆ ಗಳನ್ನು ಸರಿಪಡಿಸಲು ಮತ್ತು ತಾಲೂಕಿ ನಾದ್ಯಾಂತ ಲಭ್ಯವಿರುವ ಡಿಸಿ ಮನ್ನಾ ಭೂಮಿಯನ್ನು ಸಮುದಾ ಯದ ಭೂ ರಹಿತ ಕುಟುಂಬಗಳಿಗೆ ನೀಡಬೇಕೆಂದು ಹಾಗೂ ಖಾಸಗಿ ಭೂಮಾಲೀಕರು ಅತಿಕ್ರಮಿಸಿ ಕೊಂಡಿರುವ ಡಿಸಿ ಮನ್ನಾ ಭೂಮಿಯನ್ನು ತೆರವುಗೊಳಿಸಬೇಕೆಂದು ನಿಯೋಗ ಆಗ್ರಹಿಸಿತು.
ನಿಯೋಗದಲ್ಲಿ ಜಿಲ್ಲಾ ಸಂಘಟನ ಸಂಚಾಲಕ ಸುರೇಶ್ ಹಕ್ಲಾಡಿ, ತಾಲೂಕು ಸಂಚಾಲಕ ಕೆ.ಸಿ.ರಾಜು ಬೆಟ್ಟಿನಮನೆ, ಚಂದ್ರ ಕೊರ್ಗಿ, ಎಸ್.ಎಚ್. ಉದಯ ಕುಮಾರ್, ಚಂದ್ರ ಉಳ್ಳೂರು, ಭವಾನಿ ನಾಯ್ಕ್, ದಿನೇಶ್ ಹೊಸ್ಮಠ, ರಾಜು ಮೊಳಹಳ್ಳಿ, ಚಂದ್ರ ಮೊಳಹಳ್ಳಿ, ಜೋಗು ಸಿದ್ದಾಪುರ, ಸುಧೀರ್ ಮೊಳಹಳ್ಳಿ ಹಾಗೂ ಮಹಿಳಾ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.