ಬೈಕ್ ಸ್ಕಿಡ್: ಸವಾರ ಮೃತ್ಯು
Update: 2025-06-28 21:52 IST
ಮಣಿಪಾಲ, ಜೂ.28: ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಓರ್ವ ಸವಾರ ಮೃತಪಟ್ಟ ಘಟನೆ ಹಿರೇಬೆಟ್ಟು ಗ್ರಾಮದ ಅಂಗಡಿಬೆಟ್ಟು ಎಂಬಲ್ಲಿ ಹೊಲೋ ಬ್ಲಾಕ್ ಪ್ಯಾಕ್ಟರಿಯ ಬಳಿ ನಡೆದಿದೆ.
ಮೃತರನ್ನು ಬೊಮ್ಮು ಜಾನು ಬೊಡೇಕರ್ ಎಂದು ಗುರುತಿಸಲಾಗಿದೆ. ಇವರು ಮತ್ತು ಇನ್ನೋರ್ವ ಜೂ.26ರಂದು ಸಂಜೆ ವೇಳೆ ಬೈಕ್ ಸಮೇತ ಸ್ಕಿಡ್ ಆಗಿ ರಸ್ತೆಗೆ ಬಿದ್ದು ಗಾಯಗೊಂಡಿದ್ದರು. ಇವರ ಪೈಕಿ ಬೊಮ್ಮು ಜಾನುನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳಿಯ ಕಿಮ್ಸ್ ಆಸ್ಪತ್ರೆಗೆ ದಾಖಿಸಲಾಗಿತ್ತು. ಆದರೆ ಅವರು ಜೂ.27ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.