×
Ad

ಪಿ.ಎಂ.ಆವಾಸ್ ಯೋಜನೆಯಡಿ ಸಹಾಯಧನ: ಅರ್ಜಿ ಆಹ್ವಾನ

Update: 2025-06-28 22:00 IST

ಉಡುಪಿ: ಭಾರತ ಸರ್ಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) 2.0 ಯೋಜನೆಯಡಿ ಸರ್ವರಿಗೂ ಸೂರು ಒದಗಿಸಲು 2024ರ ಸೆಪ್ಟಂಬರ್ 1ರಿಂದ ಅನ್ವಯವಾಗುವಂತೆ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ಮುಂದಿನ ಏದು ವರ್ಷಗಳಲ್ಲಿ ದೇಶಾದ್ಯಂತ ನಗರ ಪ್ರದೇಶಗಳಲ್ಲಿ ಒಂದು ಕೋಟಿ ಬಡವರು, ಕೊಳಚೆ ನಿವಾಸಿಗಳನ್ನು ಒಳಗೊಂಡಂತೆ ಮಧ್ಯಮ ವರ್ಗದವರಿಗೆ ಸೂರು ನಿರ್ಮಿಸಲು ಸಹಾಯಧನ ಒದಗಿಸಲಾಗುವುದು.

ಇದರಂತೆ ಕಾಪು ಪುರಸಭಾ ವ್ಯಾಪ್ತಿಯಲ್ಲಿ ವಾಸಿಸುವ ವಸತಿ ರಹಿತರು ಮತ್ತು ನಿವೇಶನ ರಹಿತರು ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ಸರಕಾರದ ಯುನಿಫೈಡ್ ವೆಬ್ ಪೋರ್ಟಲ್‌ನಲ್ಲೂ ಸಹ ಫಲಾನುಭವಿಗಳು ಸ್ವ-ಇಚ್ಛೆಯಿಂದ ಅಥವಾ ಸೇವಾ ಸಿಂಧು ಮತ್ತು ಗ್ರಾಮ-೧ ಮೂಲಕ - https://pmay-urban.gov.in-ನಲ್ಲಿ ಅರ್ಜಿ ಸಲ್ಲಿಸಬಹುದು.

ಅರ್ಜಿದಾರರು ಸಲ್ಲಿಸಬೇಕಾದ ದಾಖಲೆಗಳು: ಆಧಾರ್ ಕಾರ್ಡ್ ಪ್ರತಿ, ವಸತಿರಹಿತರಾದಲ್ಲಿ ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳು, ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಪಡಿತರ ಚೀಟಿ, ಬ್ಯಾಂಕ್ ಖಾತೆ ವಿವರ, ಸೆಲ್ಫ್ ಡಿಕ್ಲರೇಷನ್ ಫಾರ್ಮ್ ಸಲ್ಲಿಸಬೇಕು. ಮೊಬೈಲ್ ಸಂಖ್ಯೆ ಹಾಗೂ ಲಭ್ಯವಿದ್ದಲ್ಲಿ ಪ್ಯಾನ್ ಕಾರ್ಡ್ ಸಹ ಸಲ್ಲಿಸಬೇಕು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕಾಪು ಪುರಸಭಾ ಕಚೇರಿಯ ಡೇ-ನಲ್ಮ್(ವಸತಿ) ಶಾಖೆಯನ್ನು ಕಛೇರಿ ವೇಳೆಯಲ್ಲಿ ಬೆಳಗ್ಗೆ ೧೦ರಿಂದ ಸಂಜೆ ೫ರ ಒಳಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News