×
Ad

ಟ್ರೆಡ್ ಮಿಲ್ ಖರೀದಿಸಿವುದಾಗಿ ನಂಬಿಸಿ ವಂಚನೆ: ಪ್ರಕರಣ ದಾಖಲು

Update: 2025-07-04 21:33 IST

ಉಡುಪಿ, ಜು.4: ಓಎಲ್‌ಎಕ್ಸ್‌ನಲ್ಲಿ ಟ್ರೆಡ್ ಮಿಲ್ ಖರೀದಿಸಿವುದಾಗಿ ನಂಬಿಸಿ ಲಕ್ಷಾಂತರ ರೂ ವಂಚಿಸಿರುವ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಘ್ನೇಶ್ ಎಂಬವರು ಜು.2ರಂದು ಟ್ರೆಡ್ ಮಿಲ್‌ನ್ನು 8000ರೂ.ಗೆ ಮಾರಾಟ ಮಾಡಲು ಓಎಲ್‌ಎಕ್ಸ್‌ನಲ್ಲಿ ಹಾಕಿದ್ದು, ಅದರಂತೆ ಸಂಪರ್ಕಿಸಿದ ಅಪರಿಚಿತ ವ್ಯಕ್ತಿ ಟ್ರೆಡ್ ಮಿಲ್‌ನ್ನು 7000ರೂ. ಖರೀದಿ ಮಾಡುತ್ತೇನೆ, ಆದರೆ ಬಿಲ್ ಜೆನರೇಟ್ ಆಗಲು ಮೊದಲು ನನ್ನಿಂದ ಟ್ರೆಡ್ ಮಿಲ್‌ನ್ನು ಖರೀದಿ ಮಾಡಿದ ಹಾಗೆ ಆಗಬೇಕು, ಇದರಿಂದ ನನಗೆ ಜಿಎಸ್‌ಟಿ ಉಳಿಯುತ್ತದೆ ಹಾಗೂ ನಿಮಗೆ ನಿಮ್ಮ ಮೊತ್ತ ರಿಫಂಡ್ ಅಗುತ್ತದೆ ಎಂದು ಹೇಳಿದ್ದನು. ಅದನ್ನು ನಂಬಿದ ವಿಘ್ನೇಶ್ ಒಟ್ಟು 1,05,000ರೂ. ಹಣವನ್ನು ವರ್ಗಾವಣೆ ಮಾಡಿ ವಂಚನೆಗೆ ಒಳಗಾಗಿದ್ದಾರೆಂದು ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News