ಹಿರಿಯಡ್ಕ: ಎದೆನೋವಿನಿಂದ ವ್ಯಕ್ತಿ ಮೃತ್ಯು
Update: 2025-07-11 22:17 IST
ಹಿರಿಯಡ್ಕ, ಜು.11: ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಎದೆನೋವಿನಿಂದ ಮೃತಪಟ್ಟ ಘಟನೆ ಜು.10ರಂದು ಸಂಜೆ ಪೆರ್ಡೂರಿನಲ್ಲಿ ನಡೆದಿದೆ.
ಮೃತರನ್ನು ಪೆರ್ಡೂರು ಗ್ರಾಮದ ಮಾಧವ(59) ಎಂದು ಗುರುತಿಸಲಾಗಿದೆ. ಇವರು ಸುರೇಶ ಎಂಬವವರ ಮನೆಯಲ್ಲಿ ಕೆಲಸ ಮಾಡಿ ಪರಿಕರಗಳನ್ನು ತೊಳೆದು, ಹಟ್ಟಿಯ ಬಳಿ ಇಡಲು ಹೋಗಿದ್ದು, ಆಗ ಇವರಿಗೆ ಎದೆನೋವು ಕಾಣಿಸಿಕೊಂಡಿತ್ತೆನ್ನಲಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡ ಅವರು ಮಣಿಪಾಲ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.