ಕುಂದಾಪುರ: ಉತ್ತರ ಪ್ರದೇಶದ ಮಹಿಳೆ ನಾಪತ್ತೆ
Update: 2025-07-11 22:19 IST
ಕುಂದಾಪುರ, ಜೂ.11: ಉತ್ತರ ಪ್ರದೇಶ ಮೂಲದ ಮಹಿಳೆಯೊಬ್ಬರು ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ನಾಪತ್ತೆಯಾಗಿರುವ ಘಟನೆ ಕೋಟೇಶ್ವರದಲ್ಲಿ ನಡೆದಿದೆ.
ನಾಪತ್ತೆಯಾದವರನ್ನು ಉತ್ತರ ಪ್ರದೇಶ ಮೂಲದ ಕೋಟೇಶ್ವರ ಬಾಡಿಗೆ ಮನೆ ನಿವಾಸಿ ಮಹದೇವ ಎಂಬವರ ಪತ್ನಿ ಅಂಜಲಿ(28) ಎಂದು ಗುರುತಿಸಲಾಗಿದೆ. ಜು.7ರಂದು ಇವರ ಪತಿ ಕೆಲಸಕ್ಕೆ ಹೋಗಿದ್ದ ವೇಳೆ ಇಬ್ಬರು ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಹೋಗಿ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.