ಉಡುಪಿ ಪೊಲೀಸರಿಂದ ವಿದ್ಯಾರ್ಥಿಗಳಿಗೆ ಬ್ಯಾಗ್, ಡ್ರಾಯಿಂಗ್ ಕಿಟ್ ವಿತರಣೆ
Update: 2025-07-14 18:39 IST
ಉಡುಪಿ, ಜು.14: ಉಡುಪಿ ಉಪವಿಭಾಗ ಪೊಲೀಸ್ ವತಿಯಿಂದ ಅಜ್ಜರಕಾಡಿನ ಸರಕಾರಿ ಸಂಯುಕ್ತ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್, ಡ್ರಾಯಿಂಗ್ ಕಿಟ್, ನೀರಿನ ಬಾಟ್ಲಿ, ಸಿಹಿ ತಿಂಡಿಗಳನ್ನು ಸೋಮವಾರ ವಿತರಿಸಲಾಯಿತು.
ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ್, ಉಡುಪಿ ಡಿವೈಎಸ್ಪಿಪ್ರಭು ಡಿ.ಟಿ., ನಗರ ಪೊಲೀಸ್ ಠಾಣೆಯ ನಿರೀಕ್ಷಕ ಮಂಜುನಾಥ್ ಬಡಿಗೇರ್ ವಿದ್ಯಾರ್ಥಿಗಳಿಗೆ ವಿವಿಧ ಸಾಮಾಗ್ರಿಗಳನ್ನು ವಿತರಿಸಿದರು.
ಮಲ್ಪೆಪೊಲೀಸ್ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್, ನಗರ ಠಾಣೆಯ ಎಸ್ಸೈಗಳಾದ ಗೋಪಾಲಕೃಷ್ಣ ಜೋಗಿ, ನಾರಾಯಣ, ಸಂಚಾರ ಪೊಲೀಸ್ ಠಾಣೆಯ ಎಸ್ಸೈ ಪ್ರಕಾಶ್ ಕಾಡಬೆಟ್ಟು, ಸುಮಾ, ಪ್ರಭಾಕರ್, ಮುಖ್ಯೋ ಪಾಧ್ಯಾಯಿನಿ ಉಷಾ ಕಿರಣ್, ಅಧ್ಯಾಪಕಿ ರವೀಂದ್ರ ಮೊದಲಾದವರು ಉಪಸ್ಥಿತರಿದ್ದರು.