ಮಹಾ ಸಮ್ಮೇಳನ: ಉಡುಪಿ ಜಿಲ್ಲಾ ಸ್ವಾಗತ ಸಮಿತಿ ರಚನಾ ಸಭೆ
ಪಡುಬಿದ್ರಿ, ಜು.19: ಸಮಸ್ತ ಕೇಂದ್ರೀಯ ಜಂ ಇಯ್ಯಯತುಲ್ ಉಲಮಾ ಸಂಘಟನೆಯು ಭಾರತೀಯ ಮುಸ್ಲಿಂ ಸಮುದಾಯದ ಧಾರ್ಮಿಕ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ್ದು, ಪ್ರಸಕ್ತ ಧಾರ್ಮಿಕ ದೊಂದಿಗೆ ಲೌಕಿಕ ಶಿಕ್ಷಣಕ್ಕೂ ಅಗತ್ಯವಿರುವ ಯೋಜನೆಯನ್ನು ರೂಪಿಸಿ ಕಾರ್ಯಗತ ಗೊಳಿಸುತ್ತಿದೆ ಎಂದು ಸಮಸ್ತ ಕೇಂದ್ರೀಯ ಮುಶವರಾ ಸದಸ್ಯ ಹಾಗೂ ಮೂಲ್ಕಿ ಮುದರಿಸ ಹಾಜಿ ಉಸ್ಮಾನ್ ಫೈಝಿ ಹೇಳಿದ್ದಾರೆ.
ಪಣಿಯೂರು ಮದ್ರಸದಲ್ಲಿ ಶುಕ್ರವಾರ ನಡೆದ ಅಂತಾರಾಷ್ಟ್ರೀಯ ಶತಮಾನತ್ಸವ ಮಹಾ ಸಮ್ಮೇಳನದ ಉಡುಪಿ ಜಿಲ್ಲಾ ಸ್ವಾಗತ ಸಮಿತಿ ರಚನಾ ಸಭೆಯಲ್ಲಿ ಅವರು ಮಾತನಾಡುತಿದ್ದರು.
ಪಣಿಯೂರು ಜುಮಾ ಮಸೀದಿ ಸಮಿತಿ ಅಧ್ಯಕ್ಷ ಶಫೀ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು. ಸಭೆಯನ್ನು ಎರ್ಮಾಳ್ ಮಸೀದಿ ಖತೀಬ್ ಮೌಲಾನ ಅಲೀ ಮಣ್ಣಾನಿ ಉದ್ಘಾಟಿಸಿದರು. ಪಣಿಯೂರು ಜುಮಾ ಮಸೀದಿ ಖತೀಬ್ ಅಬೂಬಕ್ಕರ್ ದಾರಿಮಿ ಪ್ರಸ್ತಾವನೆಗೈದರು. ಸಂಪನ್ಮೂಲ ವ್ಯಕ್ತಿಗಳಾಗಿ ಫಾರೂಖ್ ಹನೀಫಿ, ಇರ್ಫಾನ್ ಫೈಝಿ, ಸುಲೈಮಾನ್ ಸುರಭಿ,, ಶರೀಫ್ ಫೈಝಿ, ಹಾಶಿರ್ ಫೈಝಿ, ಅಬೂಬಕರ್ ಸಿದ್ದೀಕ್ ಫೈಝಿ, ಅಬ್ದುಲ್ ರಹ್ಮಾನ್ ಹಾಜಿ, ಹಮ್ಮಬ್ಬಾ ಮೊಯಿದೀನ್, ರಹೀಮ್ ಕುಂಜೂರು ಭಾಗವಹಿಸಿದ್ದರು,
ಇದೇ ಸಂಧರ್ಭದಲ್ಲಿ ಉಡುಪಿ ಜಿಲ್ಲಾ ಸ್ವಾಗತ ಸಮಿತಿಗೆ ಆಯ್ಕೆ ಮಾಡಲಾಯಿತು. ಮುಖ್ಯ ರಕ್ಷಾಧಿಕಾರಿ ಗಳಾಗಿ ಉಸ್ಮಾನ್ ಫೈಝಿ ಮೂಲ್ಕಿ, ಶಫೀ ಅಹ್ಮದ್, ಫಾರೂಕ್ ಹನೀಫಿ, ರಕ್ಷಾಧಿಕಾರಿಯಾಗಿ ಮೌಲಾನ ಅಲೀ ಮಣ್ಣಾನಿ, ಚೇಯರ್‌ಮೆನ್ ಆಗಿ ಅಬ್ದುಲ್ ರಹ್ಮಾನ್ ಕುಚಿಕಾಡ್, ವೈಸ್ ಚೆಯರ್‌ಮೆನ್ ಆಗಿ ಅಬ್ದುಲ್ ರಹ್ಮಾನ್ ಕಣ್ಣಂಗಾರ್, ಹಮ್ಮಬ್ಬಾ ಮೊಯಿದೀನ್, ಪ್ರಧಾನ ಸಂಚಾಲಕರಾಗಿ ಆಗಿ ಇರ್ಫಾನ್ ಫೈಝಿ, ಖಜಾಂಚಿ ಯಾಗಿ ಸುಲೈಮಾನ್ ಎರ್ಮಾಲ್, ಸಂಚಾಲಕರುಗಳಾಗಿ ಮೊಹಿಯುದ್ದಿನ್ ರೆಂಜಾಲ, ಎಂ.ಶರೀಫ್ ಫೈಝಿ, ಎಂ.ಹಾಶೀರ್ ಫೈಝಿ, ಸಫವಾನ್ ಕುಂಜೂರು, ಸಂಯೋಜಕರಾಗಿ ಇಕ್ಬಾಲ್ ಕಣ್ಣಂಗಾರ್, ಬಿ. ಹೆಚ್. ಅಬ್ದುಲ್ ರಹ್ಮಾನ್, ಸಿ. ಪಿ. ಅಬ್ದುಲಾಹ್ಮಾನ್ ಹಾಗೂ 313 ಮಂದಿ ಸದಸ್ಯರನ್ನು ಕಾರ್ಯಕಾರಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು. ಮೊಯಿದೀನ್ ರೆಂಜಾಳ ಸ್ವಾಗತಿಸಿದರು. ಅಬ್ದುಲ್ ರಹ್ಮಾನ್ ವಂದಿಸಿದರು.