×
Ad

ಕೊಂಕಣ ರೈಲ್ವೆಯಿಂದ ಆರೋಗ್ಯ ಇಲಾಖೆಗೆ ವಿವಿಧ ಕೊಡುಗೆ ಹಸ್ತಾಂತರ

Update: 2025-07-29 20:05 IST

ಉಡುಪಿ, ಜು.29: ಕೊಂಕಣ ರೈಲ್ವೆ ಕಾರ್ಪೋರೇಷನ್ (ಕೆಆರ್‌ಸಿಎಲ್) ತನ್ನ ಸಿಎಸ್‌ಆರ್ ನಿಧಿಯಿಂದ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನೀಡಿದ ಒಟ್ಟು 13.26 ಲಕ್ಷ ರೂ. ಮೌಲ್ಯದ ವಿವಿಧ ಕೊಡುಗೆಗಳನ್ನು ಇಂದು ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಇವರಿಗೆ ಹಸ್ತಾಂತರಿಸಲಾಯಿತು.

ಕೊಂಕಣ ರೈಲ್ವೆಯು ಉಡುಪಿ ಜಿಲ್ಲಾ ಕ್ಷಯರೋಗ ನಿಯಂತ್ರಣಧಿಕಾರಿ ಕಚೇರಿಗೆ ಬೊಲೆರೋ ಮಹೇಂದ್ರ ಬಿ6 ವಾಹನದ ಕೀಯನ್ನು ಜಿಲ್ಲಾಧಿಕಾರಿ ಸ್ವರೂಪ ಟಿ ಕೆ, ಕಾರವಾರದ ಕೊಂಕಣ ರೈಲ್ವೆ ರೀಜನಲ್ ಮ್ಯಾನೇಜರ್ ಆಶಾ ಶೆಟ್ಟಿ ಇವರಿಂದ ಸ್ವೀಕರಿಸಿದರು.

ಇದರೊಂದಿಗೆ ಪೋರ್ಟೆಬಲ್ ಎಕ್ಸ್‌ರೇ ಯುನಿಟ್ ಹಾಗೂ ಎಲ್‌ಇಡಿ ಮೈಕ್ರೋಸ್ಕೋಪ್‌ನ್ನು ಸಹ ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಬಸವರಾಜ್ ಹುಬ್ಬಳ್ಳಿ, ಸೀನಿಯರ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಗೋಪಾಲಕೃಷ್ಣ, ಡೆಪ್ಯೂಟಿ ಚೀಪ್ ಮೆಡಿಕಲ್ ಆಫೀಸರ್ ಡಾ. ಸ್ಟೀವನ್ ಜಾರ್ಜ್, ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಡಿಟಿಓ ಡಾ.ಚಿದಾನಂದ ಸಂಜು ಮತ್ತು ಡಿಎಂಓ ಡಾ. ಪ್ರಶಾಂತ್ ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News