×
Ad

ಹೈದರಾಬಾದಿಗೆ ಹೋದ ವ್ಯಕ್ತಿ ವರ್ಷದಿಂದ ನಾಪತ್ತೆ

Update: 2025-08-04 21:22 IST

ಕುಂದಾಪುರ, ಆ.4: ವಡೇರಹೋಬಳಿ ಗ್ರಾಮದ ಅಂಬೇಡ್ಕರ್ ನಗರದ ನರಸಿಂಹ(34) ಎಂಬವವರು ಕಳೆದ ಒಂದು ವರ್ಷಗಳಿಂದ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ಇವರು 2024ರ ಆ.14ರಂದು ಹೈದರಬಾದಿನಲ್ಲಿ ಹೊಟೇಲ್ ಕೆಲಸಕ್ಕೆ ಹೋಗಿದ್ದು, ಆ.15ರಂದು ಹೊಟೇಲ್‌ನ ವಿಶ್ರಾಂತಿ ಕೊಠಡಿಯಲ್ಲಿ ನರಸಿಂಹಗೆ ಹಿಂದೆ ಇರುವ ಪಿಡ್ಸ್ ಖಾಯಿಲೆಯು ಉಲ್ಬಣ ಗೊಂಡಿತ್ತು. ಆಗ ಅವರನ್ನು ಹೊಟೇಲ್ ಮಾಲಕರು ವಾಪಾಸ್ಸು ಊರಿಗೆ ಕಳುಹಿಸಿಕೊಟ್ಟಿದ್ದರು. ಆದರೆ ಬಸ್ ನಿಲ್ದಾಣದಿಂದ ನರಸಿಂಹ ನಾಪತ್ತೆಯಾಗಿದ್ದರು. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News