×
Ad

ಶಿವರಾಮ ಕಾರಂತರ ಬರಹಗಳು ಈಗಲೂ ಜೀವಂತ: ರೇಖಾ ಬನ್ನಾಡಿ

Update: 2023-11-19 18:33 IST

ಕುಂದಾಪುರ: ಶಿವರಾಮ ಕಾರಂತರು ತಮ್ಮ ಕಾದಂಬರಿಗಳಲ್ಲಿ ಹಳ್ಳಿಯ ಹೆಣ್ಣು ಮಕ್ಕಳ ಕಷ್ಟ ಸುಖಗಳನ್ನು ಮಾನವ ಅನುಕಂಪದಿಂದ ಚಿತ್ರಿಸಿದ್ದಾರೆ. ಅವರ ಬರಹಗಳು ಈಗಲೂ ಜೀವಂತವಾಗಿವೆ ಎಂದು ನಿವೃತ್ತ ಪ್ರಾಧ್ಯಪಕಿ, ಲೇಖಕಿ ಡಾ.ರೇಖಾ ಬನ್ನಾಡಿ ಹೇಳಿದ್ದಾರೆ.

ಕೋಡಿ ಬ್ಯಾರೀಸ್ ಕಾಲೇಜಿನಲ್ಲಿ ಬರಹಗಾರರ ಸಂಘದ ಉದ್ಘಾಟನೆಯನ್ನು ನ.17ರಂದು ನೆರವೇರಹಿಸಿ ಕೋಟ ಶಿವರಾಮ ಕಾರಂತ ಬದುಕು, ಬರಹ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಾಲೇಜಿನ ಉಪ ಪ್ರಾಂಶುಪಾಲೆ ಮಾಲತಿ ಅಧ್ಯಕ್ಷತೆ ವಹಿಸಿದ್ದರು. ಬರಹ ಗಾರರ ಸಂಘದ ಸಲಹೆಗಾರ ಪ್ರೊ.ಹಯವದನ ಉಪಾಧ್ಯಾಯ, ಸಂಸ್ಥೆಯ ಮುಖ್ಯಸ್ಥ ಹಾಜಿ ಅಬ್ದುಲ್ ರೆಹಮಾನ್ ಉಪಸ್ಥಿತರಿದ್ದರು.

ಕನ್ನಡ ಪ್ರಾಧ್ಯಾಪಕ ಸಂದೀಪ್ ಶೆಟ್ಟಿ ಅತಿಥಿಗಳ ಪರಿಚಯ ಮಾಡಿದರು. ಬರಹಗಾರರ ಸಂಘದ ಕಾರ್ಯದರ್ಶಿ ಆತಿಫ್ ಸ್ವಾಗತಿಸಿದರು. ವಿದ್ಯಾರ್ಥಿ ಮುಹಮ್ಮದ್ ಹುಸೈನ್ ವಂದಿಸಿದರು. ವಿದ್ಯಾರ್ಥಿನಿ ಅಮೃತ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News