ಕೆಮ್ಮಣ್ಣು ಸಹಿತ 3 ಗ್ರಾಪಂಗಳಿಗೆ ರಾಜ್ಯ ಪ್ರಶಸ್ತಿ ಪ್ರದಾನ
Update: 2023-10-02 19:29 IST
ಉಡುಪಿ, ಅ.2: ಸ್ವಚ್ಛ ಸರ್ವೇಕ್ಷಣ್ ಗ್ರಾಮೀಣ್ 2023ರ ರಾಜ್ಯ ಮಟ್ಟದ ಆಯ್ಕೆಯಾಗಿ ರಾಷ್ಟ್ರಮಟ್ಟಕ್ಕೆ ಶಿಫಾರಸು ಮಾಡಲ್ಪಟ್ಟಿರುವ ಉಡುಪಿ ತಾಲೂಕಿನ ಕೆಮ್ಮಣ್ಣು(ತೋನ್ಸೆ), ತ್ರಾಸಿ, ಸಾಣೂರು ಗ್ರಾಪಂಗಳಿಗೆ ರಾಜ್ಯ ಪ್ರಶಸ್ತಿಯನ್ನು ಇಂದು ಬೆಂಗಳೂರಿನ ವಿಧಾನ ಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಪ್ರಶಸ್ತಿ ಪ್ರದಾನ ಮಾಡಿದರು. ಕೆಮ್ಮಣ್ಣು ಗ್ರಾಪಂ ಪರವಾಗಿ ಅಧ್ಯಕ್ಷೆ ಕುಸುಮಾ, ಪಿಡಿಓ ಕಮಲಾ, ಉಪಾಧ್ಯಕ್ಷ ಅರುಣ್ ಫೆರ್ನಾಂಡೀಸ್, ಸದಸ್ಯರಾದ ವತ್ಸಲಾ ವಿನೋದ್, ಮಹಮ್ಮದ್ ಇದ್ರೀಸ್ ಪ್ರಶಸ್ತಿ ಸ್ವೀಕರಿಸಿದರು.