ಟೀಮ್ ಮಲೆನಾಡು ಹ್ಯೂಮೇನಿಟಿರಿಯನ್ ಟ್ರಸ್ಟ್ ಬೆಳ್ವೆ ಅಸ್ತಿತ್ವಕ್ಕೆ
Update: 2023-08-12 18:53 IST
ಮುಸ್ತಾಕ್
ಹೆಬ್ರಿ, ಆ.12: ಸಾಮಾಜಿಕ ಮತ್ತು ಮಾನವೀಯ ಕಾರ್ಯಗಳಲ್ಲಿ ತೊಡಗುವ ಉದ್ದೇಶದಿಂದ ಸ್ಥಾಪಿಸಲಾದ ಟೀಮ್ ಮಲೆನಾಡು ಹ್ಯೂಮೇನಿಟಿರಿಯನ್ ಟ್ರಸ್ಟ್ ಬೆಳ್ವೆ ಇದರ ನೂತನ ಪದಾಧಿಕಾರಿಗಳನ್ನು ಇತ್ತೀಚೆಗೆ ಆಯ್ಕೆ ಮಾಡ ಲಾಯಿತು.
ಅಧ್ಯಕ್ಷರಾಗಿ ಮುಸ್ತಾಕ್ ಅಹಮದ್ ಬೆಳ್ವೆ, ಉಪಾಧ್ಯಕ್ಷರಾಗಿ ಬೆಳ್ವೆ ಅಬ್ದುಲ್ ಶುಕುರ್ ಸೌದಿ ಅರೇಬಿಯಾ, ಪ್ರಧಾನ ಕಾರ್ಯ ದರ್ಶಿಯಾಗಿ ಅಜೆಕಾರ್ ಮುಹಮ್ಮದ್ ರಫೀಕ್ ಒಮಾನ್, ಕೋಶಾಧಿಕಾರಿಯಾಗಿ ಮುಹಮ್ಮದ್ ಆಸೀಫ್ ಆಲ್ಬಾಡಿ, ಟ್ರಸ್ಟೀಗಳಾಗಿ ಡಾ.ಇರ್ಫಾನ್ ಶಿವಮೊಗ್ಗ, ಮಲ್ಪೆ ಮುಹಮ್ಮದ್ ಅಸಿರ್ ಬೆಂಗಳೂರು, ಸರ್ಫರಾಝ್ ಕುವೈತ್, ಬೈಂದೂರ್ ಅಬ್ದುಲ್ ಸಮಿ ಯು.ಎಸ್.ಎ., ಅನ್ಸಾರ್ ಹೊಸಂಗಡಿ, ದಸ್ತಗೀರ ಸಾಹೇಬ್ ಕಂಡ್ಲೂರ್, ಅನ್ವರ್ ಕಂಡ್ಲೂರು, ಇರ್ಫಾನ್ ನೆರಳಕಟ್ಟೆ, ನಝೀರ್ ಶಾ ಅಜೆಕಾರು, ಅರಾಫತ್ ಅಲ್ಬಾಡಿ, ಮುಹಮ್ಮದ್ ರೆಯನ್ ಬೆಳ್ವೆ, ಮೌಲಾನ ಝಮೀರ್ ಅಹಮದ್ ರಶದಿ, ಹುಸೇನ್ ಹೈಕಾಡಿ, ಮುಹಮ್ಮದ್ ಫಿರ್ ಉಡುಪಿ ಅವರನ್ನು ಆಯ್ಕೆ ಮಾಡಲಾಯಿತು.