ಉದ್ನಾ- ಮಂಗಳೂರು ಜಂಕ್ಷನ್ ರೈಲಿಗೆ ಎರಡು ತಾತ್ಕಾಲಿಕ ಹೆಚ್ಚುವರಿ ಕೋಚ್
Update: 2023-11-24 19:21 IST
ಉಡುಪಿ, ನ.24: ಪ್ರಯಾಣಿಕರ ಜನದಟ್ಟಣೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಉದ್ನಾ ಹಾಗೂ ಮಂಗಳೂರು ಜಂಕ್ಷನ್ ನಡುವೆ ಸಂಚರಿಸುವ ವಿಶೇಷ ರೈಲಿಗೆ ನ.24 ಮತ್ತು 25ರಂದು ಎರಡು ಹೆಚ್ಚುವರಿ ಸ್ಲೀಪರ್ ಕೋಚ್‌ಗಳನ್ನು ತಾತ್ಕಾಲಿಕ ನೆಲೆಯಲ್ಲಿ ಸೇರ್ಪಡೆಗೊಳಿಸಲಾಗುತ್ತಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.