×
Ad

ಉಡುಪಿ: ಅಕ್ರಮ ಪಟಾಕಿ ದಾಸ್ತಾನು; 455 ಕೆ.ಜಿ ಸುಡುಮದ್ದು ವಶ

Update: 2023-11-08 19:43 IST

ಸಾಂದರ್ಭಿಕ ಚಿತ್ರ

ಉಡುಪಿ, ನ.8: ಅಕ್ರಮವಾಗಿ ಸಾಗಾಟ ಮಾಡಲು ವಾಹನಕ್ಕೆ ಲೋಡ್ ಮಾಡುತ್ತಿದ್ದ ಪಟಾಕಿಗಳನ್ನು ಉಡುಪಿ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

ಆರೋಪಿ ಬಡಾನಿಡಿಯೂರಿನ ಪ್ರಕಾಶ್ ಎಂಬಾತ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಹಾಗೂ ಪರವಾನಿಗೆ ಇಲ್ಲದೇ ಅಕ್ರಮವಾಗಿ ಪಟಾಕಿ ಸ್ಪೋಟಕಗಳನ್ನು ಅಪಾಯಕಾರಿ ರೀತಿಯಲ್ಲಿ ದಾಸ್ತಾನು ಇಟ್ಟು ಕೊಂಡಿದ್ದು, ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದ ಎಂದು ದೂರಲಾಗಿದೆ.

ಈ ಪಟಾಕಿಗಳನ್ನು ನ.7ರಂದು ಸಾಗಿಸಲು ವಾಹನಕ್ಕೆ ಲೋಡ್ ಮಾಡುತ್ತಿರು ವಾಗ ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು ಒಟ್ಟು 455ಕೆ.ಜಿ ತೂಕದ 87,500ರೂ. ಮೌಲ್ಯದ ಪಟಾಕಿ ಸುಡುಮದ್ದುಗಳನ್ನು ಹಾಗೂ ಸಾಗಾಟಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಂಡರು.

ತಮಿಳುನಾಡಿನ ಶಿವಕಾಶಿಯ ಫ್ಯಾಕ್ಟರಿಯವರು ಪರವಾನಿಗೆ ಇಲ್ಲದ ವ್ಯಕ್ತಿಗೆ ಅಕ್ರಮವಾಗಿ ಪಟಾಕಿ ಸ್ಫೋಟಕಗಳನ್ನು ಮಾನವ ಪ್ರಾಣಕ್ಕೆ ಅಪಾಯ ಉಂಟಾಗುವ ರೀತಿಯಲ್ಲಿ ಮಾರಾಟ ಮಾಡಿರುವುದಾಗಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News