ಉಡುಪಿ-ಮಣಿಪಾಲ ಬೀದಿದೀಪ ಸಮಸ್ಯೆ: ಡಿಸಿಯಿಂದ ಪರಿಶೀಲನೆ
Update: 2023-08-11 22:02 IST
ಉಡುಪಿ, ಆ.11: ಕಡಿಯಾಳಿಯಿಂದ ಮಣಿಪಾಲ ಎಂ.ಐ.ಟಿವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿನ ಬೀದಿದೀಪ ಇಲ್ಲದೆ ಇರುವ ಸಮಸ್ಯೆ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಇಂದು ನಗರಸಭೆ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲನೆ ನಡೆಸಿದರು.
ಹೆದ್ದಾರಿಯ ಡಿವೈಡರ್‌ಗಳ ಮಧ್ಯೆ ಬೀದಿ ದೀಪ ಅಳವಡಿಸುವ ಕಾರ್ಯವನ್ನು ಪ್ರಥಮ ಆದ್ಯತೆಯಲ್ಲಿ ಕೈಗೊಳ್ಳಬೇಕು ಹಾಗೂ ಈ ಕುರಿತ ಕಡತವನ್ನು ಇಂದೇ ಸಲ್ಲಿಸುವಂತೆ ಜಿಲ್ಲಾಧಿಕಾರಿ, ನಗರಸಭೆ ಪೌರಾಯುಕ್ತ ರಾಯಪ್ಪ ಅವರಿಗೆ ಸೂಚನೆ ನೀಡಿದರು.