×
Ad

ಉಡುಪಿ: ಆಗಸ್ಟ್ 16ರಿಂದ 21ರವರೆಗೆ ವಿದ್ಯುತ್ ವ್ಯತ್ಯಯ

Update: 2023-08-16 20:56 IST

ಉಡುಪಿ, ಆ.16: ಆಗಸ್ಟ್ 16ರಿಂದ 21ರವರೆಗೆ ಬೆಳಿಗ್ಗೆ 9:00 ಗಂಟೆ ಯಿಂದ ಮಧ್ಯಾಹ್ನ 3 ಗಂಟೆಯವರೆಗೆ 220/110ಕೆವಿ ಕೇಮಾರ್ ಸ್ವೀಕರಣಾ ಕೇಂದ್ರದಲ್ಲಿ 100 ಎಂ.ವಿ.ಎ ಪರಿವರ್ತಕದಲ್ಲಿ ತೈಲ ಶೋಧನೆ ಕಾಮಗಾರಿ ಯನ್ನು ಅತೀ ತುರ್ತಾಗಿ ಹಮ್ಮಿಕೊಂಡಿರುವುದರಿಂದ ಕಾರ್ಕಳ ಮತ್ತು ಹೆಬ್ರಿ ತಾಲೂಕಿನಾದ್ಯಂತ ಲೋಡ್ ಶೇಡ್ಡಿಂಗ್ ಮಾಡಬೇಕಾಗಿದೆ.

ಆದ್ದರಿಂದ ಸದರಿ ದಿನಗಳಂದು 220ಕೆವಿ ಕೇಮಾರ್ ಸ್ವೀಕರಣಾ ಸ್ಥಾವರ ಕೇಮಾರ್‌ನಿಂದ ಸರಬರಾಜು ಮಾಡಲಾಗುವ 110 ಕೆವಿ ಉಪಕೇಂದ್ರಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ವಾಗಬಹುದು.

ಅಲ್ಲದೇ 220ಕೆವಿ ಸ್ವೀಕರಣಾ ಕೇಂದ್ರ ಕೇಮಾರ್‌ನಲ್ಲಿ 100ಎಂ.ವಿ.ಎ. 220/110ಕೆವಿ ಪರಿವರ್ತಕ ಸಂಖ್ಯೆ: 01ರ ತೈಲ ಶೋಧನೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ, 220ಕೆವಿ ಸ್ವೀಕರಣಾ ಸ್ಥಾವರ ಕೇಮಾರ್‌ನಿಂದ ಸರಬರಾಜು ಮಾಡಲಾಗುವ 110ಕೆವಿ ಉಪಕೇಂದ್ರಗಳ ಉಡುಪಿ, ಬ್ರಹ್ಮಾವರ, ಕಾಪು ತಾಲೂಕಿನಾದ್ಯಂತ ಅನಿಯಮಿತ ವಿದ್ಯುತ್ ವ್ಯತ್ಯಯ ವಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News