×
Ad

ಉಡುಪಿ ವಲಯ ಬಾಲಕ, ಬಾಲಕಿಯರ ಕರಾಟೆ ಪಂದ್ಯಾಟ

Update: 2023-08-07 20:31 IST

ಮಲ್ಪೆ: ಉಡುಪಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ 2023-24ನೆ ಸಾಲಿನ ಉಡುಪಿ ವಲಯದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಬಾಲಕ ಬಾಲಕಿಯರ ಕರಾಟೆ ಪಂದ್ಯಾಟವು ಆ.4ರಂದು ಮಲ್ಪೆ ಫ್ಲವರ್ಸ್‌ ಆಫ್ ಪ್ಯಾರಡೈಸ್ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಚ್.ಗೋಪಾಲ ಶೆಟ್ಟಿ ವಹಿಸಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಗಣಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎಚ್.ಚಂದ್ರೆಗೌಡ ಶುಭ ಹಾರೈಸಿದರು.

ಚಂದ್ರಶೇಖರ್, ಶಂಕರ್ ಸುವರ್ಣ, ಕಿರಣ್ ಕುಮಾರ್ ಶೆಟ್ಟಿ, ಸುದರ್ಶನ್ ನಾಯಕ್, ಕಿರಣ್ ಕುಂದಾಪುರ, ರೋಹಿತಾಕ್ಷ, ವಾಮನ್ ಪಾಲನ್, ರವಿ ಸಾಲ್ಯಾನ್, ಸುಭಾಸ್‌ಚಂದ್ರ ಹೆಗ್ಡೆ, ಮಲ್ಪೆ ಅಬೂಬಕ್ಕರ್ ಸಿದ್ಧಿಕ್ ಮಸೀದಿ ಅಧ್ಯಕ್ಷ ಹಾಗೂ ಶಾಲಾ ಆಡಳಿತ ಮಂಡಳಿ ಸದಸ್ಯ ನಕ್ವಾ ಯಾಹ್ಯ, ಅರೆಬಿಕ್ ವಿಭಾಗದ ಮುಖ್ಯಸ್ಥ ಇಮ್ರಾನುಲ್ಲಾ ಮೌಲಾನ, ಶಾಲಾ ಮುಖ್ಯೋಪಾಧ್ಯಾಯಿನಿ ಅಶ್ವಿನಿ ವಿ.ಕರ್ಕೇರ ಉಪಸ್ಥಿತರಿದ್ದರು.

ಪೂರ್ಣಿಮಾ ಸ್ವಾಗತಿಸಿದರು. ರೇಖಾ ವಂದಿಸಿದರು. ಜಾಫರ್ ಅಲಿ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News