×
Ad

ಕೋಡಿ ಕಾಲೇಜಿನ ರೆಡ್‌ಕ್ರಾಸ್ ಘಟಕದ ಅನಾವರಣ

Update: 2023-11-20 20:20 IST

ಕುಂದಾಪುರ, ನ.20: ಕೋಡಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ವತಿಯಿಂದ 2023-24ನೇ ಸಾಲಿನ ರೆಡ್‌ಕ್ರಾಸ್ ಘಟಕದ ಅನಾವರಣ ಕಾರ್ಯಕ್ರಮ ಇಂದು ಜರಗಿತು.

ಅಧ್ಯಕ್ಷತೆಯನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಅಬ್ದುಲ್ ರೆಹಮಾನ್ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಯಾಗಿ ಆಗಮಿಸಿದ ಜಯಕರ ಶೆಟ್ಟಿ ಮಾತನಾಡಿ, ಸ್ವಯಂ ಸೇವೆಯ ಮಹತ್ವ ಹಾಗೂ ರೆಡ್‌ಕ್ರಾಸ್‌ನ ಕಾರ್ಯ ವೈಖರಿ ಕುರಿತ ಮಾಹಿತಿ ನೀಡಿದರು. ವೈ.ಆರ್.ಸಿ.ಯ ಸಂಯೋಜಕ ಸತ್ಯನಾರಾಯಣ ಪೌರಾಣಿಕ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಶಮೀರ್ ಮಾತ ನಾಡಿದರು. ಅತಿಥಿಗಳಾಗಿ ಕುಂದಾಪುರ ಯೂತ್ ರೆಡ್‌ಕ್ರಾಸ್‌ನ ಕೋಶಾಧಿಕಾರಿ ಶಿವರಾಮ್ ಶೆಟ್ಟಿ, ಕುಂದಾಪುರದ ರೆಡ್‌ಕ್ರಾಸ್ ಘಟಕದ ಎಂ.ಸಿ. ಸದಸ್ಯ ಗಣೇಶ್ ಆಚಾರ್ಯ, ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಮಾಲತಿ, ಗಣಕ ವಿಭಾಗದ ಮುಖ್ಯಸ್ಥೆ ನೂತನ್, ಸಲಹಾ ಮಂಡಳಿಯ ಸದಸ್ಯ ಅಬ್ಬುಷೇಕ್ ಸಾಹೇಬ್, ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ರೆಡ್‌ಕ್ರಾಸ್ ಘಟಕದ ಸಂಯೋಜಕ ಅಜಿತ್ ಕುಮಾರ್ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಮುಹಮದ್ ರಿಜ್ವಾನ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News