×
Ad

ಅಪರಿಚಿತರಿಂದ ಮಹಿಳೆಯ ಕರಿಮಣಿ ಸರ ಕಳವು

Update: 2023-10-14 21:05 IST

ಶಂಕರನಾರಾಯಣ, ಅ.14: ಚಿನ್ನಾಭರಣ ತೊಳೆದು ಕೊಡುವುದಾಗಿ ಮನೆಗೆ ಬಂದ ಅಪರಿಚಿತರಿಬ್ಬರು ಮಹಿಳೆಯೊಬ್ಬರ ಕರಿಮಣಿ ಸರವನ್ನು ಕಳವು ಮಾಡಿ ಕೊಂಡು ಹೋಗಿರುವ ಘಟನೆ ಅ.14ರಂದು ಬೆಳಗ್ಗೆ 10.30ರ ಸುಮಾರಿಗೆ ನಡೆದಿದೆ.

ಹಿಲಿಯಾಣ ಗ್ರಾಮದ ಹೈಕಾಡಿಯ ಪಾರ್ವತಿ(65) ಎಂಬವರ ಮನೆಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬ್ಯಾಗ್ ಹಿಡಿದು ಕೊಂಡು ಬಂದಿದ್ದು, ಪಾರ್ವತಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ತೊಳೆದು ಕೊಡುವುದಾಗಿ ತಿಳಿಸಿದ್ದರು. ಅದರಂತೆ ಪಾರ್ವತಿ ತಮ್ಮ ಕುತ್ತಿಗೆಯಲ್ಲಿದ್ದ ಸುಮಾರು 1,50,000 ರೂ. ಮೌಲ್ಯದ ಸುಮಾರು 30 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ತೆಗೆದು ಮನೆಯ ಹೊರಗಡೆಯ ಅಂಗಳದ ಚಿಟ್ಟೆಯ ಮೇಲೆ ಇಟ್ಟಿದ್ದರೆನ್ನಲಾಗಿದೆ.

ಆಗ ಅಪರಿಚಿತರು ಕುಡಿಯಲು ನೀರು ಬೇಕು ಎಂದು ಹೇಳಿದ್ದು,ಅ ಅದರಂತೆ ಪಾರ್ವತಿ ನೀರು ತರಲು ಮನೆಯ ಒಳಗಡೆ ಹೋದರು. ಈ ವೇಳೆ ಆರೋಪಿಗಳು ಚಿನ್ನದ ಕರಿಮಣಿ ಸರವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News