ಲೇಖಕಿ ತಾರಾ ಭಟ್ ನಿಧನ
Update: 2023-11-06 21:45 IST
ಉಡುಪಿ: ಕನ್ನಡದ ಹಿರಿಯ ಲೇಖಕಿ, ಕಾದಂಬರಿಗಾರ್ತಿ, ಕಥೆಗಾರ್ತಿ ಉಡುಪಿಯ ತಾರಾ ಭಟ್ಟ ಇತ್ತೀಚೆಗೆ ನಿಧನರಾದರು. ಅವರಿಗೆ 89 ವರ್ಷ ಪ್ರಾಯವಾಗಿತ್ತು. ಇವರು ಕನ್ನಡದ ಖ್ಯಾತ ಲೇಖಕಿ, ಸಹೋದರಿ ಶಾರದ ಭಟ್‌ರನ್ನು ಅಗಲಿದ್ದಾರೆ. ಅವರ ಕೊನೆಯ ಆಸೆಯಂತೆ ದೇಹವನ್ನು ಕೆಎಂಸಿ ಆಸ್ಪತ್ರೆಗೆ ನೀಡಲಾಗಿದೆ.
ತಾರಾ ಭಟ್ ಅವರು ಆಂಗ್ಲ ಮತ್ತು ಕನ್ನಡ ಎರಡು ಭಾಷೆಗಳಲ್ಲೂ ಕೃತಿಗಳನ್ನು ಪ್ರಕಟಿಸಿದ್ದು, ಜನಮನ್ನಣೆಗಳಿಸಿವೆ. ಇವರು ತಮ್ಮ ಕಥೆ ಕಾದಂಬರಿಗಳಲ್ಲಿ ಸ್ತ್ರೀಶೋಷಣೆಯ ಬಗ್ಗೆ ಧ್ವನಿ ಎತ್ತಿದ್ದಾರೆ.
ಲೇಖಕಿ ತಾರಾ ಭಟ್ ಅವರ ನಿಧನಕ್ಕೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸೇರಿದಂತೆ ಪದಾಧಿಕಾರಿಗಳು ಹಿರಿಯ ಲೇಖಕ, ಪ್ರಕಾಶಕ ಸಂತಾಪ ವ್ಯಕ್ತಪಡಿಸಿದ್ದಾರೆ.